SHIVAMOGGA | MALENADUTODAY NEWS | ಮಲೆನಾಡು ಟುಡೆ Jan 25, 2025
ಶಿವಮೊಗ್ಗದಲ್ಲಿಂದು ಉಸ್ತುವಾರಿ ಸಚಿವರು ಹಾಗೂ ಶಿವಮೊಗ್ಗ ನಗರ ಶಾಸಕ ಎಸ್‌ಎನ್ ಚೆನ್ನಬಸಪ್ಪರ ನಡುವಿನ ಅಸಮಾಧಾನ ಕ್ಯಾಮರಾಗಳ ಮುಂದೆ ಪ್ರದರ್ಶನಗೊಂಡಿದೆ. ಆಶ್ರಯ ಯೋಜನೆ ಮನೆ ಹಂಚಿಕೆ ವಿಚಾರದಲ್ಲಿ ಬಿಜೆಪಿ ಕಾಂಗ್ರೆಸ್ ಎಂಬ ಪ್ರತಿಷ್ಟೆಯ ಸಮರ ನಡೆದಿದ್ದು ಈಗಾಗಲೇ ಜನರಿಗೂ ಗೊತ್ತಾಗಿದೆ. ಇದರ ಮುಂದುವರಿದ ಭಾಗ ಇವತ್ತು ನಡೆದಿದೆ.
ಇವತ್ತು ಶಿವಮೊಗ್ಗದಅಲ್ಲಮಪ್ರಭು ಉದ್ಯಾನವನದ ಅಭಿವೃದ್ದಿಗೆ ಸಂಬಂಧಿಸಿದಂತೆ ಐದು ಕೋಟಿ ಮೊತ್ತದ ಕಾಮಗಾರಿಗೆ ಶಂಕುಸ್ಥಾಪನೆ ಮಾಡಲು ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಬಂದಿದ್ದರು. ಈ ವೇಳೆ ಪ್ರೋಟೋಕಾಲ್ ಪ್ರಕಾರ ಶಾಸಕ ಎಸ್ ಎನ್ ಚೆನ್ನಬಸಪ್ಪರವರು ಸಹ ಹಾಜರಿದ್ದರು. ಶಾಸಕರು ಶಂಕುಸ್ಥಾಪನೆಯ ಸ್ಥಳಕ್ಕೆ ಬರುತ್ತಲೇ ಸಚಿವ ಮಧು ಬಂಗಾರಪ್ಪ ಬನ್ನಿ ಬನ್ನಿ ಎಂದು ಹಸ್ತಲಾಘವ ನೀಡಲು ಕೈ ಚಾಚಿದರು. ಈ ವೇಳೆ ಉಸ್ತುವಾರಿ ಸಚಿವರ ವಿರುದ್ದ ತಮ್ಮ ಅಸಮಾಧಾನವನ್ನು ಹಸ್ತಲಾಘವ ನೀಡದೇನೆ ವ್ಯಕ್ತಪಡಿಸಿದರು ಶಾಸಕ ಚೆನ್ನಬಸಪ್ಪ.
ಅದೇ ಹೊತ್ತಿನಲ್ಲಿ ಆಯನೂರು ಮಂಜುನಾಥ್‌ರವರು ನಮಗೂ ಹಸ್ತಲಾಘವ ಇಲ್ಲವೇ ಎಂದು ಪ್ರಶ್ನಿಸಿದರು. ಅದಕ್ಕೆ ನಗುತ್ತಲೇ ಚೆನ್ನಬಸಪ್ಪನವರು ನಿಮಗೆ ಕೈ ಕೊಡುತ್ತೇನೆ ಎಂದು ಶೇಕ್ ಹ್ಯಾಂಕ್ ನೀಡಿದರು. ಅಲ್ಲದೆ ನಾವು ಪ್ರಸನ್ನಕುಮಾರ್ ಕೂಡ ಚೆನ್ನಾಗಿದ್ದೇವೆ ಎಂದು ನಕ್ಕರು. ಇದೇ ಸಂದರ್ಭದಲ್ಲಿ ಇರಲಿ ಕೈಕೊಡಿ ಎಂದು ಉಸ್ತುವಾರಿ ಸಚಿವರ ಮತ್ತೊಮ್ಮೆ ಕೈ ಚಾಚಿದರು. ಆಗಲೂ ಬೇಡ ಎಂದ ಶಾಸಕರು ಕೈ ಮುಗಿದರು, ಆ ವೇಳೆ ಅಲ್ಲಿಯೇ ಇದ್ದ ಎಂಎಲ್‌ಸಿ ಬಲ್ಕಿಶ್ ಬಾನು ಶಾಸಕರ ಕೈ ಹಿಡಿದು ಉಸ್ತುವಾರಿ ಸಚಿವರ ಕಡೆಗೆ ನೀಡಿದರು. ಆಗ ಶಾಸಕರು ಹಸ್ತಲಾಘವ ನೀಡಿ ನಕ್ಕರು.

ಮೀಡಿಯಾ ಕ್ಯಾಮರಾಗಳ ಎದುರು ನಡೆದ ಈ ಪ್ರಹಸನ ಕುತೂಹಲಕ್ಕೂ ಕಾರಣವಾಯ್ತು. ಈ ಬಗ್ಗೆ ಬಳಿಕ ಮಾತನಾಡಿದ ಸಚಿವರು ಶಾಸಕರಿಗೆ ಆಶ್ರಯ ಯೋಜನೆಯ ಬಗ್ಗೆ ಸ್ವಲ್ಪ ಅಸಮಾಧಾನವಿದೆ. ಆದರೆ ಅವರು ಅಂದುಕೊಂಡಂತೆ ನಾವು ಮಾಡಲಾಗುವುದಿಲ್ಲ. ನಮ್ಮ ಸರ್ಕಾರ ಇದ್ದು, ಏನೇ ತಪ್ಪಾದರೂ ತಮ್ಮ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದರು.
SUMMARY | Shivamogga City MLA SN Channabasappa did not shake hands with in-charge Minister Madhu Bangarappa
KEY WORDS | Shivamogga City MLA SN Channabasappa, shake hands ,in-charge Minister Madhu Bangarappa