SHIVAMOGGA | MALENADUTODAY NEWS | ಮಲೆನಾಡು ಟುಡೆ Dec 15, 2024
ಶಿವಮೊಗ್ಗದಲ್ಲಿ ಮಹಿಳೆಯೊಬ್ಬರ ಹೆಸರಲ್ಲಿ ನಕಲಿ ಮರಣಪ್ರಮಾಣ ಪತ್ರ ಸಿದ್ದಪಡಿಸಿ, ಸೈಟ್‌ನ್ನ ಬೇರೆಯವರಿಗೆ ಮಾರಾಟ ಮಾಡಿದ ಆರೋಪ ಸಂಬಂಧ ಶಿವಮೊಗ್ಗ ಪಾಲಿಕೆ ಅಧಿಕಾರಿಗಳು ಹಾಗೂ ನಕಲಿ ವ್ಯಕ್ತಿಯ ವಿರುದ್ಧ ಕೇಸ್ ಕೋಟೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಏನಿದು ಕೇಸ್
ಬೊಮ್ಮನಕಟ್ಟೆಯ ಆಶ್ರಯ ಬಡಾವಣೆಯಲ್ಲಿ ಈಶ್ವರ್ ಮತ್ತು ಅವರ ಪತ್ನಿಯ ಹೆಸರಿನಲ್ಲಿ ಜಂಟಿ ಖಾತೆಯಲ್ಲಿ ಸೈಟ್ ಒಂದಿತ್ತು. ಈ ಸೈಟ್‌ಗೆ ಸಂಬಂಧಿಸಿದಂತೆ ಈಶ್ವರ್‌ರವರ ಪತ್ನಿ ಹೆಸರಲ್ಲಿ ನಕಲಿ ಮರಣಪ್ರಮಾಣ ಪತ್ರ ಸಿದ್ದಪಡಿಸಲಾಗಿದೆ. ಆನಂತರ ಸಿಂಗಲ್ ಖಾತೆ ಮಾಡಿ, ನಿವೇಶವನ್ನ ಈಶ್ವರ್ ಎಂಬ ನಕಲಿ ವ್ಯಕ್ತಿ ಮೂಲಕ ಬೇರೊಬ್ಬರಿಗೆ ಮಾರಲಾಗಿದೆ. ಇದೀಗ ಅಸಲಿ ಮಾಲೀಕ ತಮ್ಮ ನಿವೇಶನದ ಸಂಬಂಧ ಕೇಸ್ ದಾಖಲಿಸಿದ್ದಾರೆ.

SUMMARY | Case registered against Shivamogga Municipal Corporation officials
KEY WORDS | Case , Shivamogga cityl Corporation officials