SHIVAMOGGA | MALENADUTODAY NEWS | ಮಲೆನಾಡು ಟುಡೆ Jan 29, 2025
ದಿನದ ಸಂಕ್ಷಿಪ್ತ ವರದಿ
ಸುದ್ದಿ 1
ಖಾಸಗಿ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಆಟೋ ಡ್ರೈವರ್ ಒಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶಿವಮೊಗ್ಗದ ಪುರಲೆ ಗ್ರಾಮದಲ್ಲಿ ನಡೆದಿದೆ. ನಾಗೇಶ್ (35) ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ನಾಗೇಶ್ ಪತ್ನಿಯ ಆಸ್ಪತ್ರೆ ಖರ್ಚಿಗಾಗಿ ಖಾಸಗಿ ಫೈನಾನ್ಸ್‌ಗಳಲ್ಲಿ ಮೂರು ಲಕ್ಷ ರೂಪಾಯಿಸಾಲ ಮಾಡಿದ್ರು. ಈ ಸಾಲ ಮರುಪಾವತಿ ವಿಚಾರಕ್ಕೆ ಫೈನಾನ್ಸ್‌ನ ಉದ್ಯೋಗಿಗಳು ಮಧ್ಯರಾತ್ರಿಯೆಲ್ಲಾ ಮನೆಗೆ ಬಂದು ಕಿರುಕುಳ ನೀಡುತ್ತಿದ್ದರಂತೆ. ಈ ಹಿನ್ನೆಲೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.
ಸುದ್ದಿ 2
ಸಕ್ರೆಬೈಲ್ ಆನೆ ಬಿಡಾರದಲ್ಲಿ ಆನೆಯೊಂದರಿಂದ ಬಿದ್ದು ಮಾವುತ ಗಾಯಗೊಂಡಿದ್ದಾನೆ. ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಘಟನೆ ಹೇಗೆ ನಡೆಯಿತು ಎಂಬುದರ ಬಗ್ಗೆ ಅರಣ್ಯ ಇಲಾಖೆಯಿಂದ ಅಧಿಕೃತ ಮಾಹಿತಿ ಲಭ್ಯವಾಗಬೇಕಿದೆ. ಆಕಸ್ಮಿಕವಾಗಿ ನಡೆದ ಘಟನೆಯಲ್ಲಿ ಹೆಚ್ಚಿನ ಅಪಾಯ ಸಂಭವಿಸಿಲ್ಲ. ಆಲೆ ಹೆಸರಿನ ಆನೆಯ ಮೇಲಿಂದ ಮಾವುತ ಗೌಸ್ ಬಿದ್ದಿದ್ದು, ಸದ್ಯ ಅವರು ಸುಧಾರಿಸಿಕೊಳ್ಳುತ್ತಿದ್ದಾರೆ.

ಸುದ್ದಿ 3
ಜನವರಿ 21ರಿಂದ ಆರಂಭವಾಗಿದ್ದ ಶಿಕಾರಿಪುರ ಮಾರಿಕಾಂಬಾ ದೇವಿ ಜಾತ್ರೆಗೆ ನಿನ್ನೆದಿದನ ತೆರೆಬಿದ್ದಿದೆ. ಮಾರಿಕಾಂಬಾ ದೇವಿ ಮೂರ್ತಿ ಯನ್ನು ವಿವಿಧ ವಾದ್ಯ ಹಾಗೂ ಜೋಗಯ್ಯನವರ ಗಾಯನದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಪಟ್ಟಣದ ಗಡಿಭಾಗಕ್ಕೆ ಕೊಂಡೊಯ್ದು ಜಾತ್ರೆಗೆ ತೆರೆ ಎಳೆಯಲಾಯ್ತು. ಮೂರು ವರ್ಷಕ್ಕೊಮ್ಮೆ ನಡೆಯುವ ಈ ಮಾರಿಕಾಂಬಾ ದೇವಿ ಜಾತ್ರೆಯಲ್ಲಿ ಈ ಸಲ ಭರ್ಜರಿ ವಹಿವಾಟಿನ ಜೊತೆ ಜಾತ್ರೆ ವಿಶೇಷವಾಗಿ ನಡೆದಿದೆ.
ಸುದ್ದಿ 4
ಅತ್ತ ಸಾಗರ ತಾಲ್ಲೂಕು ಬ್ಯಾಕೋಡು ಭಾಗದಲ್ಲಿ ಕಾಡು ಹಂದಿ ಕಾಟ ವಿಪರೀತವಾಗಿದೆ. ಕಳೂರು ಗ್ರಾಮದಲ್ಲಿ ಕಾಡು ಹಂದಿಗಳ ಹಾವಳಿ ಹೆಚ್ಚಾಗಿದ್ದು ಹಂದಿಗಳು ಅಡಕೆ ಸಸಿ ಮತ್ತು ಬಾಳೆ ಗಿಡಗಳನ್ನು ಸಹ ಬಿಡದೆ ಹಾಳು ಮಾಡುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದರಿಂದ 300ಕ್ಕೂ ಹೆಚ್ಚು ಅಡಿಕೆ ಸಸಿಗಳು ಹಾಳಾಗಿವೆ ಎಂದು ದೂರಲಾಗಿದೆ. ರಾತ್ರಿ ಸಮಯದಲ್ಲಿ ತೋಟಕ್ಕೆ ಆಗಮಿಸುವ ಕಾಡುಹಂದಿ ರೈತರು ಬೆಳೆಸಿದ ಅಡಿಕೆ, ಬಾಳೆ ಗಿಡಗಳನ್ನು ಮುರಿದು ಹಾಕುತ್ತಿವೆಯಂತೆ.
ಸುದ್ದಿ 5
ಶಿವಮೊಗ್ಗದ ತಮ್ಮಡಿಹಳ್ಳಿಯಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿದ ಕರುವೊಂದರ ಮೇಲೆಚಿರತೆ ದಾಳಿ ಮಾಡಿದೆ, ಇಲ್ಲಿನ ಚಿಲುಮೆಜಡ್ಡಿನ ರುಕ್ಮಿಣಮ್ಮರಿಗೆ ಸೇರಿದೆ ಕರು ಗಾಯಗೊಂಡಿದೆ. ಕರುವಿನ ಚೀರಾಟ ಕೇಳಿ ಮನೆಯವರು ಎದ್ದು ಬರುವಷ್ಟರಲ್ಲಿ ಚಿರತೆ ಅಲ್ಲಿಂದ ಓಡಿದೆ. ಆದರೆ ಚಿರತೆ ಬಾಯಿ ಹಾಕಿದ್ದರಿಂದ ಕರುವಿನ ಮೈಯಲ್ಲಿ ಹಲವು ಗಾಯಗಳಾಗಿವೆ. ಈ ಭಾಗದಲ್ಲಿ ಚಿರತೆ ಹಾವಳಿ ಜಾಸ್ತಿಯಾಗಿದ್ದು, ಇತ್ತಿಚೆಗೆ ಚಿರತೆ ನಾಯಿಯೊಂದನ್ನು ಕಚ್ಚಿಕೊಂಡು ಹೋಗಿತ್ತು ಎನ್ನುತ್ತಾರೆ ಸ್ಥಳೀಯರು
SUMMARY | shivamogga 5 news today
KEY WORDS | shivamogga 5 news today