SHIVAMOGGA | MALENADUTODAY NEWS | ಮಲೆನಾಡು ಟುಡೆ Nov 2, 2024
ಹಬ್ಬದ ನಡುವೆ ಶಿವಮೊಗ್ಗದಲ್ಲಿ ಸುರಿದ ಮಳೆಯಿಂದಾಗಿ ಮನೆಯೊಂದರ ಮೇಲೆ ಮರಬಿದ್ದು ಹಾನಿಯಾಗಿದೆ. ಸಾಗರ ತಾಲ್ಲೂಕು ತುಮುರಿ ಬಳಿಯ ಕುದರೂರು ಗ್ರಾಮದ ಬೆಳಮಕ್ಕಿ ಬಳಿ ಗಾಳಿ ಮಳೆಗೆ ರೈತರೊಬ್ಬರ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ. ಇಲ್ಲಿನ ಚೌಡನಾಯ್ಕ ಅವರ ಮನೆಯ ಮೇಲೆ ಬೃಹತ್ ಗಾತ್ರದ ತೆಂಗಿನಮರ ಬಿದ್ದು ಮನೆಯ ಹೆಂಚುಗಳು ಪುಡಿಯಾಗಿವೆ.
ಅಪರಿಚಿತ ಕಾರು ಡಿಕ್ಕಿ
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ದಾಸಕೊಪ್ಪ ಬಳಿ ಅಪರಿಚಿತ ಕಾರು ಡಿಕ್ಕಿಯಾದ ಪರಿಣಾಮ ಬೈಕ್ ಸವಾರರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಘಟನೆಯಲ್ಲಿ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬಸವನ ಹೊಂಡದಲ್ಲಿ ಪುರುಷನ ಶವ ಪತ್ತೆ
ಇತ್ತ ಯಡಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬಸವನಹೊಂಡದ ಬಳಿ ಪುರುಷನ ಶವ ಪತ್ತೆಯಾಗಿದೆ. ಮೃತರನ್ನ ಹೊಸನಗರ ತಾಲೂಕು ಮಾರುತಿಪುರ ಗ್ರಾ.ಪಂ.ವ್ಯಾಪ್ತಿಯ ಮಜ್ಞಾನ ಗ್ರಾಮದ ಚೌಡಪ್ಪ(58) ಎಂದು ಗೊತ್ತಾಗಿದೆ. ಈ ಸಂಬಂಧ ಆನಂದಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಕೆರೆಯಲ್ಲಿ ಬಟ್ಟ ತೊಳೆಯಲು ಹೋಗಿದ್ದ ಮಹಿಳೆ ಸಾವು
ಇನ್ನೂ ಆನಂದಪುರ ಸಮೀಪದ ಗಿಳಾಲಗುಂಡಿಯ ಅಮ್ಮನಕೆರೆಯಲ್ಲಿ ಬಟ್ಟೆ ತೊಳೆಯಲು ಹೋದ ಶಿವಮೊಗ್ಗ ತಾಲೂಕು ಕೋಣೆಹೊಸೂರು ಗ್ರಾಮದ ಗಾಯತ್ರಮ್ಮ (55) ಸಾವನ್ನಪ್ಪಿದ್ದಾರೆ. ಕಾಲು ಜಾರಿ ಬಿದ್ದು ಅವರು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಅಮ್ಮನಕೆರೆಗೆ ಬಟ್ಟೆ ಒಗೆಯಲು ಬರುತ್ತಿದ್ದ ಅವರು ಕತ್ತಲಾದರೂ ಬಾರದ ಹಿನ್ನೆಲೆಯಲ್ಲಿ ಮನೆಯವರು ಗಾಯತ್ರಮ್ಮರಿಗಾಗಿ ಹುಡುಕಾಟ ನಡೆಸಿದ್ದಾರೆ. ಕೆರೆ ಬಳಿ ಅವರ ಚಪ್ಪಲಿ ಮತ್ತು ಬಟ್ಟೆಗಳು ಕಂಡ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳಕ್ಕೆ ವಿಷಯ ಮುಟ್ಟಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೃತದೇಹವನ್ನ ನೀರಿನಿಂದ ಹೊರಕ್ಕೆ ತೆಗೆದಿದ್ದಾರೆ

SUMMARY | shivamogga fast news
KEYWORDS | shivamogga fast news