SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 3, 2024
ಕುವೆಂಪು ವಿಶ್ವವಿದ್ಯಾಲಯದ 37 ನೇ ಅಂತರ್ ಕಾಲೇಜು ಅಥ್ಲೆಟಿಕ್ ಕ್ರೀಡಾಕೂಟ ಡಿಸೆಂಬರ್ 3 ರಂದ 6 ರವರೆಗೆ ನಗರದ ನೆಹರು ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಕ್ರೀಡಾಕೂಟವನ್ನು ದೇಶಿಯ ವಿದ್ಯಾಶಾಲ ಸಮಿತಿ ಹಾಗೂ ಡಿವಿಎಸ್ ಕಲಾ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ಶಿವಮೊಗ್ಗ ಐ ಕ್ಯೂ ಎ ಸಿ ಇವರ ಸಂಯುಕ್ತಾಶ್ರಯದಲ್ಲಿ ನಡೆಸಲಿದ್ದೇವೆ ಎಂದು ದೇಶಿಯ ವಿದ್ಯಾಶಾಲ ಸಮಿತಿ ಕಾರ್ಯದರ್ಶಿ ಎಸ್ ರಾಜಶೇಖರ್ ತಿಳಿಸಿದರು.
ಇಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಕ್ರೀಡಾಕೂಟವು ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ನಡೆಯಲಿದೆ. ಕುವೆಂಪು ವಿಶ್ವವಿದ್ಯಾಲಯ ವ್ಯಾಪ್ತಿಯ ಶಿವಮೊಗ್ಗ ಹಾಗು ಚಿಕ್ಕಮಗಳೂರು ಜಿಲ್ಲೆಯ ಒಟ್ಟು 51 ಕಾಲೇಜುಗಳ ಸುಮಾರು 712 ಕ್ರೀಡಾಪಟುಗಳು ಈ ಕ್ರೀಡಾ ಕೂಟದಲ್ಲಿ ಭಾಗವಹಿಸುತ್ತಿದ್ದಾರೆ. ಈ ಪೈಕಿ 455 ವಿದ್ಯಾರ್ಥಿಗಳಿದ್ದು 257 ವಿದ್ಯಾರ್ಥಿನಿಯರಿದ್ದಾರೆ.160 ಜನ ಅಧಿಕಾರಿ ವರ್ಗ & ತಾಂತ್ರಿಕ ವರ್ಗ ಹಾಗೂ 75 ಜನ ಸ್ವಯಂಸೇವಕರು ಈ ಕ್ರೀಡಾಕೂಟದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದರು. ಹಾಗೆಯೇ ಈ ಕ್ರೀಡಾಕೂಟವನ್ನು ಜಿಲ್ಲಾ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಉದ್ಘಾಟಿಸಲಿದ್ದಾರೆ ಎಂದರು.

ಇದರಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ನೆಹರೂ ಕ್ರೀಡಾಂಗಣದಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಹಾಗೂ ಅಧಿಕಾರಿಗಳಿಗೆ ಕಾಲೇಜು ವತಿಯಿಂದ ಕ್ರೀಡಾಂಗಣದಲ್ಲೇ ಮದ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು
SUMMARY| The 37th Inter-College Athletic Meet of Kuvempu University will be held from December 3 to 6 at Nehru Stadium in the city.
KEYWORDS| Kuvempu University, Inter-College Athletic, Nehru Stadium, shivamogga,