ಶಿರಸಿ ಡಿಪೋ KSRTC ಬಸ್‌ ಜಪ್ತಿ ಮಾಡಿಸಿದ ಸಾಗರ ಕೋರ್ಟ್‌ ! ನಡೆದಿದ್ದೇನು?

13

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 19, 2025 ‌‌ ‌‌

ಶಿವಮೊಗ್ಗ ಜಿಲ್ಲೆ ಸಾಗರ ಕೋರ್ಟ್‌ ಮೃತವ್ಯಕ್ತಿಗೆ ಪರಿಹಾರ ನೀಡದ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಸೀಜ್‌ ಮಾಡುವಂತೆ ಸೂಚಿಸಿದ್ದು, ಅದರಂತೆ ಬಸ್‌ ಜಪ್ತಿ ಮಾಡಿ ಕೋರ್ಟ್‌ ಆವರಣದಲ್ಲಿ ನಿನ್ನೆ ನಿಲ್ಲಿಸಲಾಗಿತ್ತು. 

- Advertisement -

ಏನಿದು ಪ್ರಕರಣ 

2022 ನೇ ಸಾಲಿನ ಜುಲೈ 7 ರಂದು ಸಾಗರ ಪ್ರವಾಸಿ ಮಂದಿರ ಬಳಿ ಆಕ್ಸಿಡೆಂಟ್‌ವೊಂದು ಸಂಭವಿಸಿತ್ತು. ಬೆಳಗ್ಗೆ ಸೈಕಲ್‌ನಲ್ಲಿ ಪೇಪರ್‌ ಹಾಕುತ್ತಿದ್ದ ಯುವಕನಿಗೆ ಶಿರಸಿ ಡಿಪೋದ ಬಸ್‌ ಡಿಕ್ಕಿಯಾಗಿತ್ತು. ಪರಿಣಾಮ ಗಣೇಶ್‌ ಎಂಬಾತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದ. ಈ ಸಂಬಂಧ ಪರಿಹಾರಕ್ಕಾಗಿ ಕುಟುಂಬಸ್ಥರು ಸಾಗರ ಕೋರ್ಟ್‌ ಮೊರೆಹೋಗಿದ್ದರು. ಇನ್ನೂ 5 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಅರ್ಜಿ ವಿಚಾರಣೆ ನಡೆದು, ಕಳೆದ ವರ್ಷ 2024 ರ ಜುಲೈ 8 ರಂದು ಸಂತ್ರಸ್ತರ ಪರವಾಗಿ ಕೋರ್ಟ್‌ ತೀರ್ಪು ನೀಡಿತ್ತು. ಮೃತ ಕುಟುಂಬಕ್ಕೆ ಮೂರು ತಿಂಗಳಿನಲ್ಲಿ ಪರಿಹಾರ ಒದಗಿಸಬೇಕು ಎಂದು ಕೆಎಸ್‌ಆರ್‌ಟಿಸಿ ಗೆ ಸೂಚನೆ ನೀಡಿತ್ತು. ಆದರೆ  ಕೋರ್ಟ್‌ ತೀರ್ಪು ದಿಕ್ಕರಿಸಿ ಪರಿಹಾರ ನೀಡದ ಹಿನ್ನೆಲೆಯಲ್ಲಿ ಬಸ್‌ ಜಪ್ತಿ ಮಾಡಿ ಕೋರ್ಟ್‌ ಆವರಣದಲ್ಲಿ ನಿಲ್ಲಿಸಲಾಗಿದೆ. 

Share This Article