SHIVAMOGGA | MALENADUTODAY NEWS | ಮಲೆನಾಡು ಟುಡೆ Dec 13, 2024
ಮಲೆನಾಡ ಮಂದಿಯ ಸಾಧನೆಗೆ ಇನ್ನೊಬ್ಬ ಮಹಿಳೆ ತಮ್ಮದೆ ಆದ ಕೊಡುಗೆಯೊಂದನ್ನ ಸೇರಿಸಿದ್ದಾರೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಯುವತಿಯೊಬ್ಬರು ವಿಶ್ವ ಆರೋಗ್ಯ ಸಂಸ್ಥೆಯ (WHO) ವಿಜ್ಞಾನಿಯಾಗಿ ಆಯ್ಕೆಯಾಗಿದ್ದಾರೆ.
ಸಾಗರ ತಾಲ್ಲೂಕು ಆನಂದಪುರ ಸಮೀಪದ ಹೊಸೂರು ಗ್ರಾಪಂ ವ್ಯಾಪ್ತಿಯ ನೇದರವಳ್ಳಿ ಗ್ರಾಮದ ಯುವ ವಿಜ್ಞಾನಿ ಕವನಶ್ರೀ ವಿಶ್ವ ಆರೋಗ್ಯ ಸಂಸ್ಥೆಯ (WHO) ವಿಜ್ಞಾನಿಯಾಗಿ ಆಯ್ಕೆಯಾಗಿದ್ದಾರೆ. ಭಾರತದಿಂದ ಸ್ಪರ್ಧಾತ್ಮಕ ಪರೀಕ್ಷೆ ಬರೆದ 8 ಅಭ್ಯರ್ಥಿಗಳ ಪೈಕಿ ಕವನಶ್ರೀಯವರು ಆಯ್ಕೆಯಾಗಿದ್ದಾರೆ. ಇವರು ನೇದರವಳ್ಳಿಯ ಪ್ರಗತಿಪರ ಕೃಷಿಕ ಶುಂಠಿ ಮಂಜಪ್ಪ ಮತ್ತು ಜಯಲಕ್ಷ್ಮೀ ದಂಪತಿಗಳ ಪುತ್ರಿಯಾಗಿದ್ದಾರೆ. ಇವರ ಸಾಧನೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
SUMMARY | young woman from Anandpur, Sagar taluk, Shimoga district, has been selected as a scientist for the World Health Organization (WHO).

KEY WORDS | Anandpura, Sagar taluk, Shimoga district, young woman selected as a scientist for the World Health Organization ,WHO