SHIVAMOGGA | MALENADUTODAY NEWS | ಮಲೆನಾಡು ಟುಡೆ | Mar 14, 2025
ಐಪಿಎಲ್ ಹಬ್ಬಕ್ಕೆ ಇನ್ನೇನು ಕ್ಷಣಗಣನೆ ಆರಂಭವಾಗಿದೆ. ಮಾರ್ಚ್ 22 ರಿಂದ ಐಪಿಎಲ್ ಆರಂಭವಾಗುತ್ತಿದ್ದು, ಕ್ರಿಕೆಟ್ ಪ್ರೇಮಿಗಳು ಐಪಿಲ್‌ನ್ನು ನೋಡಲು ಕಾತರದಿಂದ ಕಾದು ಕುಳಿತಿದ್ದಾರೆ. ಇದರ ನಡುವೆ ಡೆಲ್ಲಿ ಕ್ಯಾಪಿಟಲ್ ತನ್ನ ತಂಡದ ನಾಯಕನನ್ನಾಗಿ ಸ್ಟಾರ್ ಅಲ್ರೌಂಡರ್ ಆದ ಅಕ್ಷರ್ ಪಾಟೀಲ್‌ರನ್ನು ಆಯ್ಕೆ ಮಾಡಿದೆ.
ಬಿಡ್ಡಿಂಗ್ ನಲ್ಲಿ ಈ ಬಾರಿ ಡೆಲ್ಲಿ ಕ್ಯಾಪಿಟಲ್ ತಂಡ ಕನ್ನಡಿಗ ಕೆಎಲ್ ರಾಹುಲ್‌ರನ್ನು 14 ಕೋಟಿ ಕೊಟ್ಟು ಖರೀದಿ ಮಾಡಿತ್ತು. ಈ ಹಿಂದೆ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಕಿಂಗ್ಸ್ ಇಲವೆನ್ ಪಂಜಾಬ್ ತಂಡದ ನಾಯಕನಾಗಿ ಅನುಭವವನ್ನು ಹೊಂದಿದದ್ದಾರೆ. ಈ ಹಿನ್ನಲೆ ಕ್ರಿಕೆಟ್ ಪ್ರೇಮಿಗಳು ಕೆಎಲ್ ರಾಹುಲ್ ಡೆಲ್ಲಿ ತಂಡದ ಕ್ಯಾಪ್ಟನ್ ಅಗಹುದುದೆಂದು ಭಾವಿಸಿದ್ದರು. ಆದರೆ ಇದರ ನಡುವೆ ಡೆಲ್ಲಿ ತಂಡ ಅಚ್ಚರಿ ಎಂಬಂತೆ ಆಕ್ಷರ್ ಪಾಟೀಲ್‌ರನ್ನ ತಂಡದ ನಾಯಕರನ್ನಾಗಿ ಆಯ್ಕೆ ಮಾಡಿದೆ.

ಅಕ್ಷರ ಪಾಟೀಲ್ ರವರು 2019 ರಿಂದ ಡೆಲ್ಲಿ ಕ್ಯಾಪಿಟಲ್ ತಂಡದಲ್ಲಿ ಉತ್ತಮ ಪ್ರದರ್ಶನವನ್ನು ನೀಡುತ್ತಾ ಬಂದಿದ್ದಾರೆ. ಇದರಿಂದಾಗಿ ಕಳೆದ ನವೆಂಬರ್‌ನಲ್ಲಿ ನಡೆದ ಮೆಗಾ ಹರಾಜಿನಲ್ಲಿ 16.50 ಕೋಟಿ ರೂ.ಗೆ ಅವರರನ್ನು ಡೆಲ್ಲಿ ತಂಡ ಮತ್ತೆ ಖರೀದಿ ಮಾಡಿತ್ತು. ಮೆಗಾ ಹರಾಜಿಗೂ ಮುನ್ನ ಡಿಸಿ ಫ್ರಾಂಚೈಸಿಯಿಂದ ಪಂತ್ ನಿರ್ಗಮಿಸಿದಾಗ, ಅಕ್ಷರ್ ಅವರೇ ತಂಡದ ಅತ್ಯಂತ ಅನುಭವಿ ಆಟಗಾರ ಎಂದು ಡೆಲ್ಲಿ ತಂಡ ಭಾವಿಸಿತ್ತು. ಅಷ್ಟೇ ಅಲ್ಲದೆ ಅವರು ಅವರು ಡೆಲ್ಲಿ ಕ್ಯಾಪಿಟಲ್ ತಂಡದಲ್ಲಿ ಕಳೆದ ಆರು ಋತುಗಳಲ್ಲಿ ತಂಡಕ್ಕಾಗಿ 82 ಪಂದ್ಯಗಳನ್ನು ಆಡಿದ್ದು, ಕಳೆದ ವರ್ಷ ಅವರು ಸುಮಾರು 30 ಸರಾಸರಿಯಲ್ಲಿ 235 ರನ್ ಗಳಿಸಿದರು. ಮತ್ತು 7.65 ರ ಎಕಾನಮಿಯಲ್ಲಿ 11 ವಿಕೆಟ್‌ಗಳನ್ನು ಪಡೆಡಿದ್ದರು, ಈ ಎಲ್ಲಾ ಸಾಧನೆ ಹಾಗೂ ಅವರ ಅನುಭವವನ್ನು ಗಮನಿಸಿ ಅವರನ್ನು ಡೆಲ್ಲಿ ತಂಡದ ನಾಯಕರನ್ನಾಗಿ ಮಾಡಲಾಗಿದೆ ಎನ್ನಲಾಗಿದೆ.
Axar Patel
Captain, Delhi Capitals ????❤️ pic.twitter.com/S2qNuuBO7T— Delhi Capitals (@DelhiCapitals) March 14, 2025
SUMMARY | Delhi Capitals have named star all-rounder Axar Patil as the captain of their team.
KEYWORDS | Delhi Capitals, captain, star allrounder, Axar Patil,