SHIVAMOGGA | MALENADUTODAY NEWS | ಮಲೆನಾಡು ಟುಡೆ
Oct 9, 2024 | SHIVAMOGGA RAIN | ಶಿವಮೊಗ್ಗದಲ್ಲಿ ನಿನ್ನೆ ಸುರಿದ ಮಳೆಯ ಅಬ್ಬರಕ್ಕೆ ಅವಾಂತರಗಳೇ ಸೃಷ್ಟಿಯಾಗಿವೆ. ಒಂದು ಕಡೆ ಪುರದಾಳು ಡ್ಯಾಮ್‌ನ ಕೋಡಿ ತುಂಬಿ ಹರಿದಿದೆ. ಇನ್ನೊಂದೆಡೆ ತುಂಗಾನದಿಗೆ ನಿನ್ನೆ ದಿನ ನೀರಿನ ಹರಿವು ದಿಢೀರ್ ಎಂಬಂತೆ ಏರಿಕೆ ಆಗಿದೆ.
ಈ ನಡುವೆ ನೀರಿನ ಹರಿವಿನ ಅರಿವಿಲ್ಲದೇ ತುಂಗಾ ನದಿಯ ಬಂಡೆ ಮೇಲಿದ್ದ ವ್ಯಕ್ತಿಯೊಬ್ಬ, ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ದಡ ಸೇರಲಾಗದೇ ರಾತ್ರಿಯಿಡಿ ಬಂಡೆಯ ಮೇಲೆಯೇ ಕಳೆದಿದ್ದಾನೆ.
ಇವತ್ತು ಬೆಳಗ್ಗೆ ಆತನನ್ನ ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಶಿವಮೊಗ್ಗ ನಗರದ ಹೊಳೆ ಬಸ್ ಸ್ಟಾಪ್ ಬಳಿ ಇರುವ ತುಂಗಾ ನದಿಯ ಹಳೆಯ ಸೇತುವೆ ಬಳಿಯಲ್ಲಿ ಈ ಘಟನೆ ನಡೆದಿದೆ.
ಗೋಪಾಲ್ (35) ಎಂಬಾತ ನಿನ್ನೆ ದಿನ ತುಂಗಾ ನದಿಯ ದಂಡೆಯ ಮೇಲೆ ಮಲಗಿದ್ದ. ರಾತ್ರಿ ವಿಪರೀತ ಮಳೆಯಾಗಿದೆ. ಬೆಳಗ್ಗೆ ಎಚ್ಚರವಾಗುವ ಹೊತ್ತಿಗೆ ತುಂಗಾ ನದಿಯಲ್ಲಿ ಬಂಡೆ ತುದಿಯವರೆಗೂ ನೀರು ಹರಿಯುತ್ತಿದೆ.

ಇದರಿಂದ ಆತ ಗಾಬರಿಗೊಂಡಿದ್ದು ಸಹಾಯಕ್ಕಾಗಿ ಯಾಚಿಸಿದ್ದಾನೆ. ಸ್ಥಳೀಯರು ಆತನನ್ನ ಗಮನಿಸಿ ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೋಟ್ ಬಳಸಿ ಯುವಕನನ್ನ ರಕ್ಷಣೆ ಮಾಡಿದ್ದಾರೆ.
ಯುವಕ ಯಾಕೆ ನದಿಯ ಬಂಡೆ ಮೇಲೆ ಮಲಗಿದ್ದ ಎಂಬುದು ಸ್ಪಷ್ಟವಾಗಿಲ್ಲ. ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸಿದ್ದಾರೆ.
SUMMARY | A man who was trapped in danger on a rock on tunga river near an old bridge in Shivamogga was rescued by fire men
KEYWORDS | man trapped on a rock on tunga river, near an old bridge in Shivamogga, rescued by fire men.