ರಾಜ್ಯದಲ್ಲಿ 1135 ಹುದ್ದೆ, ಶಿವಮೊಗ್ಗದಲ್ಲಿ 36 ಹುದ್ದೆ | SSLC ಪಾಸ್‌, ಪರೀಕ್ಷೆ ಇಲ್ಲ | ಅಂಚೆ ಇಲಾಖೆಯಲ್ಲಿ ಉದ್ಯೋಗ

13

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 13, 2025 ‌‌ 

ಉದ್ಯೋಗಕ್ಕಾಗಿ ಹುಡುಕುತ್ತಿರುವವರಿಗಾಗಿ ಇಲ್ಲೊಂದು ಉತ್ತಮ ಅವಕಾಶ ಇದ್ದು, ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಶಾಖಾ ಅಂಚೆ ಪಾಲಕ, ಸಹಾಯಕ ಶಾಖಾ ಅಂಚೆ ಪಾಲಕ ಮತ್ತು ಡಾಕ್ ಸೇವಕ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಅಹ್ವಾನಿಸಲಾಗಿದೆ.  ಒಟ್ಟು ಭಾರತೀಯ ಅಂಚೆ ಕಚೇರಿಯಲ್ಲಿ ಒಟ್ಟು 21,413 ಗ್ರಾಮೀಣ ಡಾಕ್ ಸೇವಕ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು, ಈ ಪೈಕಿ ಕರ್ನಾಟಕದಲ್ಲಿ 1135 ಹುದ್ದೆಗಳಿಗೆ ಅರ್ಜಿ ಹಾಕಲು ಅವಕಾಶ ಇದೆ. ಹತ್ತನೇ ತರಗತಿ ಪಾಸ್‌ ಆದ 18 ರಿಂದ 40 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. 

- Advertisement -

ರಾಜ್ಯದ ಮೀಸಲ ಹುದ್ದೆಗಳ ಪೈಕಿ ಸಾಮಾನ್ಯ ವರ್ಗದವರಿಗೆ 482, ಒಬಿಸಿ 260, ಎಸ್‌ಸಿ 175, ಎಸ್‌ಟಿ ಅಭ್ಯರ್ಥಿಗಳಿಗೆ 78 ಹಾಗೂ ಆರ್ಥಿಕ ದುರ್ಬಲ ವರ್ಗದವರಿಗೆ 122 ಹುದ್ದೆಗಳನ್ನು ಮೀಸಲಿಡಲಾಗಿದೆ. ಇನ್ನೂ ಯಾವ್ಯಾವ ಜಿಲ್ಲೆಗೆ ಎಷ್ಟೆಷ್ಟು ಹುದ್ದೆಗಳಿವೆ ಎನ್ನುವ ವಿವರದ ಪಟ್ಟಿ ಇಲ್ಲಿದೆ ನೋಡಿ. 

ವಿಭಾಗ

ಪೋಸ್ಟ್‌ಗಳ ಸಂಖ್ಯೆ

ಬಾಗಲಕೋಟೆ

24

ಬಳ್ಳಾರಿ

41

ಬೆಂಗಳೂರು ಜಿಪಿಒ

4

ಬೆಳಗಾವಿ

27

ಬೆಂಗಳೂರು ಪೂರ್ವ

54

ಬೆಂಗಳೂರು ದಕ್ಷಿಣ

49

ಬೆಂಗಳೂರು ಪಶ್ಚಿಮ

13

ಬೀದರ್

24

ಚನ್ನಪಟ್ಟಣ

30

ಚಿಕ್ಕಮಗಳೂರು

37

ಚಿಕ್ಕೋಡಿ

18

ಚಿತ್ರದುರ್ಗ

35

ದಾವಣಗೆರೆರಿಯಲ್ ಕಚೇರಿ

34

ಧಾರವಾಡ

29

ಗದಗ

9

ಗೋಕಾಕ್

3

ಹಾಸನ

50

ಹಾವೇರಿ

20

ಕಲಬುರಗಿ

27

ಕಾರವಾರ

32

ಕೊಡಗು

33

ಕೋಲಾರ

50

ಕೊಪ್ಪಳ

22

ಮಂಡ್ಯ

43

ಮಂಗಳೂರು

23

ಮೈಸೂರು

45

ನಂಜನಗೂಡು

35

ಪುತ್ತೂರು

50

ರಾಯಚೂರು

13

ಆರ್‌ಎಂಎಸ್ ಬಿಜಿ

24

ಆರ್‌ಎಂಎಸ್ ಎಚ್‌ಬಿ

2

ಆರ್‌ಎಂಎಸ್ ಕ್ಯೂ

2

ಶಿವಮೊಗ್ಗ

36

ಸಿರ್ಸಿ

33

ತುಮಕೂರು

64

ಉಡುಪಿ

56

ವಿಜಯಪುರ

26

ಯಾದಗಿರಿ

18

ಒಟ್ಟು

1135

ಉದ್ಯೋಗದ ಸಂಬಂಧ ಫೆಬ್ರವರಿ 11 ರಂದು ಅಧಿಸೂಚನೆ ಬಿಡುಗಡೆ ಮಾಡಲಾಗಿದ್ದು, ಅರ್ಜಿಗಳನ್ನು ಸಲ್ಲಿಸಲು ಪ್ರಾರಂಭ ದಿನಾಂಕ ಫೆಬ್ರವರಿ 10 2025 . ಅರ್ಜಿಗಳಿಗೆ ಅಂತಿಮ ದಿನಾಂಕ ಮಾರ್ಚ್ 3, 2025. ಈ ಹುದ್ದೆಗಳಿಗೆ ಎಸ್‌ಎಸ್‌ಎಲ್‌ಸಿ ಅಂಕಗಳನ್ನು ಆಧರಿಸಿ ಪರಿಶೀಲನೆ ನಡೆಯಲಿದೆ. ಹಾಗೊಂದು ವೇಳೆ ಎಸ್‌ಎಸ್‌ಎಲ್‌ಸಿಯಲ್ಲಿ ಶ್ರೇಣಿಕೃತ ಗ್ರೇಡ್‌ ನೀಡಲಾಗಿದ್ದರೆ ಅದನ್ನು ನಿಗದಿತ ಸೂತ್ರದ ಅನ್ವಯ ಪರಿಶೀಲನೆ ನಡೆಸಲಾಗುತ್ತದೆ. ಬಳಿಕ ಮೆರಿಟ್‌ ಪಟ್ಟಿಯನ್ನು ರೆಡಿಮಾಡಿ, ದಾಖಲಾತಿ ಪರಿಶೀಲನೆ ನಡೆಸಲಾಗುತ್ತದೆ. ಆನಂತರ ಉದ್ಯೋಗಕ್ಕೆ ಆಯ್ಕೆ ಮಾಡಲಾಗುತ್ತದೆ. ಪಿಯುಸಿ, ಡಿಗ್ರಿ ಪರೀಕ್ಷೆಗಳನ್ನು ಈ ಉದ್ಯೋಗಗಳಿಗೆ ಪರಿಗಣಿಸುತ್ತಿಲ್ಲ. 

ಅರ್ಜಿ ಸಲ್ಲಿಸುವುದು ಹೇಗೆ ಎನ್ನುವುದನ್ನು ಗಮನಿಸುವುದಾದರೆ, ಮೊದಲು  indiapostgdsonline.gov.in  ಲಿಂಕ್‌ ಮೇಲೆ ಕ್ಲಿಕ್‌ ಮಾಡಿ, ಅದರಲ್ಲಿ ರಿಜಿಸ್ಟರ್‌ ಟ್ಯಾಬ್‌ ಮೇಲೆ ಕ್ಲಿಕ್‌ ಮಾಡಿ ನಿಮ್ಮ  ಹೆಸರು, ಜನ್ಮ ದಿನಾಂಕ, ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ, ಹಾಗೂ ಅದರಲ್ಲಿ ನಮೂದಿಸಿದ ವಿವರಗಳನ್ನ ಬರ್ತಿ ಮಾಡಿ  ಲಾಗಿನ್ ಮಾಡಬೇಕು. ಬಳಿಕ ವೈಯಕ್ತಿಕ, ಶೈಕ್ಷಣಿಕ ಮತ್ತು ಕಾಂಟಾಕ್ಟ್‌ ವಿವರಗಳನ್ನ ನೀಡಬೇಕು. ಫೋಟೋ ಹಾಗೂ ಓದಿದ ಪ್ರಮಾಣ ಪತ್ರಗಳನ್ನು ಸ್ಕ್ಯಾನ್‌ ಮಾಡಿ ಅಪ್‌ಲೋಡ್‌ ಮಾಡಬೇಕು. ಆನಂತರ ಶುಲ್ಕ ಪಾವತಿಸಿದರೆ ಅರ್ಜಿ ಸಲ್ಲಿಸಿದಂತೆ. 

ಇನ್ನಷ್ಟು ವಿವರಗಳಿಗೆ ಸಂಪರ್ಕಿಸಿ  : https://indiapostgdsonline.gov.in/

 

SUMMARY | India Post Gramin Dak Sevaks GDS India Post  recruitment,   recruitment for the Gramin Dak Sevak (GDS) posts in 2025, 

KEY WORDS | India Post Gramin Dak Sevaks GDS India Post  recruitment,   recruitment for the Gramin Dak Sevak (GDS) posts in 2025, 

Share This Article
Leave a Comment

Leave a Reply

Your email address will not be published. Required fields are marked *