SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 19, 2024
ಮುಂಬೈ| ಮುಂಬೈನ ಸಮುದ್ರದಲ್ಲಿ ನೀಲ್‌ಕಮಾಲ್ ಎಂಬ ಹೆಸರಿನ ಬೋಟ್‌ಗೆ ಭಾರತೀಯ ನೌಕಾಪಡೆಯ ಸ್ಪೀಡ್ ಬೋಟ್ ಡಿಕ್ಕಿ ಹೊಡೆದು ಬೀಕರ ಅವಘಾತ ಸಂಭವಿಸಿದೆ. ಇದರಿಂದಾಗಿ 10 ಮಂದಿ ಪ್ರವಾಸಿಗರು ಹಾಗೂ 3 ಮಂದಿ ನೌಕಾಪಡೆ ಸಿಬ್ಬಂದಿ ಸೇರಿ ಒಟ್ಟು 13 ಮಂದಿ ಮೃತಪಟ್ಟಿದ್ದಾರೆ.
ಮುಂಬೈನ ಬಂದರಿನಲ್ಲಿ ನೌಕಾಪಡೆಯ ಬೋಟ್ ಸರಿಯಾಗಿ ಕಾರ್ಯನಿರ್ವಹಿಸುತ್ತದೆಯೇ ಎಂಬುದರ ಬಗ್ಗೆ ಪರೀಕ್ಷೆ ನಡೆಸುತ್ತಿತ್ತು. ಆ ವೇಳೆ ನೌಕಾಪಡೆಯ ಸ್ಪೀಡ್ ಬೋಟ್‌ನ ಇಂಜಿನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಅತ್ತ ಮುಂಬೈನ ಗೇಟ್ ವೇ ಆಫ್ ಇಂಡಿಯಾದಿಂದ ಎಲಿಫೆಂಟಾಗೆ 80 ಜನರನ್ನು ಹೊತ್ತುಕೊಂಡು ನಿಲ್ ಕಮಾಲ್ ಹೆಸರಿನ ಈ ಬೋಟ್ ಪ್ರಯಾಣ ಬೆಳೆಸಿತ್ತು. ಇತ್ತ ವಿರುದ್ಧ ದಿಕ್ಕಿನಿಂದ ಬಂದ ಸ್ಪೀಡ್ ಬೋಟ್ ಪ್ರಯಾಣಿಕರು ಚಲಿಸುತ್ತಿದ್ದ ನೀಲ್‌ಕಮಾಲ್ ಬೋಟ್ ಗೆ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಇದೀಗ ಪ್ರಯಾಣಿಕರನ್ನು ರಕ್ಷಿಸುವ ಕಾರ್ಯನಡೆಯುತ್ತಿದ್ದು, ಅದಕ್ಕಾಗಿ ನೌಕಾ ಹೆಲಿಕಾಪ್ಟರ್‌ಗಳು, 11 ನೌಕಾ ಕ್ರಾಫ್ಟ್‌ಗಳು, 1 ಕೋಸ್ಟ್ ಗಾರ್ಡ್ ಬೋಟ್ ಮತ್ತು 3 ಸಾಗರ ಪೊಲೀಸ್ ಕ್ರಾಫ್ಟ್‌ಗಳನ್ನು ಕಾರ್ಯಾಚರಣೆಗೆ ಬಳಸಲಾಗುತ್ತಿದೆ ಎಂದು ತಿಳಿಸಿದೆ.

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಪಡ್ನವೀಸ್ ಇದ್ದಕ್ಕೆ ಪತಿಕ್ರಿಯಿಸಿದ್ದು, ಮುಂಬೈ ನಗರದ ಬಳಿ ಅರಬ್ಬಿ ಸಮುದ್ರದಲ್ಲಿ ನೀಲ್ಕಮಲ್ ಕಂಪನಿಯ ಪ್ರಯಾಣಿಕರ ದೋಣಿ ಅಪಘಾತದ ಘಟನೆ ಅತ್ಯಂತ ದುರದೃಷ್ಟಕರ. ಇದುವರೆಗಿನ ಮಾಹಿತಿ ಪ್ರಕಾರ 101 ಪ್ರಯಾಣಿಕರನ್ನು ರಕ್ಷಿಸಲಾಗಿದೆ. ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೋಟ್‌ನಲ್ಲಿಎಷ್ಟು ಜನ ಇದ್ದರೂ ಎಂಬ ಖಚಿತ ಮಾಹಿತಿ ತಿಳಿದಿಲ್ಲ ಎಂದಿದ್ದಾರೆ.
ಈ ಘಟನೆಗೆ ಪ್ರಧಾನಿ ನರೇಂದ್ರ ಮೋದಿಯವರು ಸಂತಾಪ ಸೂಚಿಸಿ. ಈ ಅವಘಡದಿಂದ ಮೃತ ಪಟ್ಟ ಕುಟುಂಬಕ್ಕೆ ತಲಾ 2 ಲಕ್ಷ ಹಾಗೂ ಗಾಯಾಳುಗಳಿಗೆ ತಲಾ ₹50 ಸಾವಿರ ಪರಿಹಾರವನ್ನು ಘೋಷಿಸಿದ್ದಾರೆ. ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
The Prime Minister has announced an ex-gratia of Rs. 2 lakh from PMNRF for the next of kin of each deceased in the boat mishap in Mumbai. The injured would be given Rs. 50,000. https://t.co/EPwReaayYk
— PMO India (@PMOIndia) December 18, 2024
SUMMARY | The incident took place when an Indian Navy speedboat collided with a boat named Neel Kamal in the sea in Mumbai.
KEYWORDS | Navy speedboat, Neel Kamal, Mumbai,