ಮದುವೆ ಹೆಸರಲ್ಲಿ ಪುರುಷರಿಗೆ ದ್ರೋಹ | ಶಿವಮೊಗ್ಗ ಮೂಲದ ಲೇಡಿ ಅರೆಸ್ಟ್ | ಹುಡುಗರೇ ಹುಷಾರ್‌

13

SHIVAMOGGA | MALENADUTODAY NEWS | Sep 1, 2024  ಮಲೆನಾಡು ಟುಡೆ 

- Advertisement -

ಅವಕಾಶ ಸಿಕ್ಕರೆ ಸಾಕು, ಸಿಕ್ಕಿದ ಅವಕಾಶದಲ್ಲಿಯೇ ಮೋಸ ಮಾಡುತ್ತಾರೆ. ಇದು ಅಂತಹ ಪ್ರಪಂಚ ಇದಕ್ಕೆ ಸಾಕ್ಷಿ ಎಂಬಂತೆ ಶಿವಮೊಗ್ಗದ ಯುವತಿಯೊಬ್ಬರು ಮದುವೆ ಹೆಸರಿನಲ್ಲಿ ವ್ಯಕ್ತಿಯೊಬ್ಬನಿಗೆ ವಂಚನೆ ಮಾಡಲು ಹೋಗಿ ಚಿಕ್ಕಬಳ್ಳಾಪುರದಲ್ಲಿ ಸಿಕ್ಕಿಬಿದ್ದಿದ್ದಾಳೆ

ಏನಿದು ಪ್ರಕರಣ

ಚಿಕ್ಕಬಳ್ಳಾಪುರದ ವ್ಯಕ್ತಿಯೊಬ್ಬ ಮರು ಮದುವೆ ಸಂಬಂಧ ತನ್ನ ಹೆಸರನ್ನ ಮ್ಯಾಟ್ರಿಮೋನಿಯೊಂದರಲ್ಲಿ ನೋಂದಾಯಿಸಿದ್ದ. ಈ ವೇಳೆ ಆತನಿಗೆ ಶಿವಮೊಗ್ಗ ಮೂಲದ ಪ್ರಸ್ತುತ ಬೆಂಗಳೂರಿನಲ್ಲಿ ನೆಲಸಿರುವ ಕೋಮಲ ಎಂಬಾಕೆ ಮ್ಯಾಟ್ರಿಮೋನಿಯಲ್ಲಿ ಲಿಂಕ್‌ ಆಗಿದ್ದಾಳೆ. ಅಲ್ಲದೆ ಈ ಬಗ್ಗೆ ಮಾತುಕತೆ ನಡೆದು ಕೋಮಲೆ ಆತನನ್ನ ಮದುವೆಯಾಗಲು ಒಪ್ಪಿದ್ದಾಳೆ. 

ಇದರ ನಡುವೆ ಕೋಮಲ ತನ್ನ ಮೊಬೈಲ್‌ನಿಂದ ವರನಿಗೆ ಮೆಸೇಜ್‌ ಕಳುಹಿಸಿ ತನಗೆ ಹಣದ ಅವಶ್ಯಕತೆ ಇರುವುದಾಗಿ ತಿಳಿಸಿದ್ದಾರೆ. ತನ್ನ ಗಂಡ ಸಾವನ್ನಪ್ಪಿದ್ದು, ಅದರ ಪರಿಹಾರದ ಹಣ 6 ಕೋಟಿ ರೂಪಾಯಿ ಬಂದಿದೆ. ಇಬ್ಬರು ಮದುವೆಯಾಗುತ್ತೇವೆ ಆ ಹಣ ಇಬ್ಬರಿಗೂ ಸೇರುತ್ತದೆ. ಆದರೆ ಪರಿಹಾರದ ಹಣ ಪಡೆಯೋಕೆ  7,40,000 ಟ್ಯಾಕ್ಸ್‌ ಕಟ್ಟಬೇಕಿದೆ. ಆ ಹಣವನ್ನ ಅರೆಂಜ್‌ ಮಾಡಿ ಎಂದಿದ್ದಾಳೆ. 

ಇದನ್ನ ಹೌದು ಎಂದು ನಂಬಿದ ಸಂತ್ರಸ್ತ ಹಣ ಕೊಟ್ಟು ಮುಂದಿನ ಮಾತುಕತೆಗೆ ಸಿದ್ದವಾಗಿದ್ದಾನೆ. ಈ ವೇಳೆ ಕೋಮಲ ಹಣ ಪಡೆದ ಬೆನ್ನಲ್ಲೆ ಎಲ್ಲಾ ಲಿಂಕ್‌ ಬ್ಲಾಕ್‌ ಮಾಡಿ ಹುಡುಗನಿಂದ ದೂರವಾಗಿದ್ದಾಳೆ. ಇದರಿಂದ ಅನುಮಾನಗೊಂಡ ಹುಡುಗ ಚಿಕ್ಕಬಳ್ಳಾಪುರ ಸೈಬರ್‌ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಸದ್ಯ ಸೈಬರ್‌ ಪೊಲೀಸರು ಕೋಮಲಳನ್ನ ಅಂದರ್‌ ಮಾಡಿದ್ದಾರೆ. ವಿಶೇಷ ಅಂದರೆ ಆಕೆಯ ವಿರುದ್ಧ ಇದೇ ರೀತಿಯ ಇನ್ನಷ್ಟು ವಂಚನೆ ಪ್ರಕರಣಗಳಿವೆ ಎಂದು ತಿಳಿದುಬಂದಿದೆ. 

ಇನ್ನಷ್ಟು ಸುದ್ದಿಗಳು

ಆನ್ ಲೈನ್ ಮನಿ ಟ್ರೇಡಿಂಗ್ ದಂಧೆಗೆ ಸಿಲುಕಿ ಆತ್ಮಹತ್ಯೆಗೆ ಶರಣಾದನೇ ತೀರ್ಥಹಳ್ಳಿಯ ರ್ಯಾಂಕ್ ವಿದ್ಯಾರ್ಥಿ,ಕಿಚ್ಚ ?

ಅಗ್ನಿವೀರ್‌ | ಒಂದೇ ಕಾರಣಕ್ಕೆ ನೂರಾರು ವಿದ್ಯಾರ್ಥಿಗಳು ಕೆಲಸ ಕಳೆದುಕೊಳ್ಳಬೇಕಾಯಿತು | ನಡೆದಿದ್ದೇನು?

Bhadra dam | ಮತ್ತೆ ಬರುತ್ತಿದೆ ಮಳೆ | ತುಂಗಾ ಡ್ಯಾಂ ಭರ್ತಿ, ಭದ್ರಾ ಡ್ಯಾಂನಲ್ಲಿ ಎಷ್ಟಿದೆ ನೀರಿನ ಮಟ್ಟ!?

Share This Article