ಮಂಜು ಇರಲಿದೆ ಮಳೆ ಬರಲಿದೆ | ಹೇಗಿರಲಿದೆ ಹವಾಮಾನ? | ಹವಾಮಾನ ಮುನ್ಸೂಚನೆ

13

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 5, 2024

ಮಲೆನಾಡಿನ ಮೇಲೆ ಫೆಂಗಲ್‌ ಚಂಡಮಾರುತದ ಪರಿಣಾಮ ಕಡಿಮೆಯಾಗುತ್ತಿದೆ. ಇವತ್ತಿನ ಹವಾಮಾನ ಮುನ್ಸೂಚನೆಯನ್ನು ಗಮನಿಸುವುದಾದರೆ, ಹವಾಮಾನ ಇಲಾಖೆ ಬೆಂಗಳೂರು ಇವತ್ತು ರಾಜ್ಯದ ಹಲವೆಡೆ ಒಣಹವೆ ಮುಂದುವರಿಯಲಿದೆ ಎಂದು ತಿಳಿಸಿದೆ. ಭಾಗಶಃ ಮೋಡ ಕವಿದ ಆಕಾಶ ಹಾಗೂ ಹಗುರ ಮಳೆಯ ಸಾಧ್ಯತೆಯ ಮನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಬಹುತೇಕ ಗರಿಷ್ಟ 27 ಡಿಗ್ರಿ ಸೆಲ್ಸಿಯಸ್‌ನಷ್ಟು ತಾಪಮಾನ ಇರಲಿದ್ದು, ಕನಿಷ್ಟ 18 ಡಿಗ್ರಿ ಸೆಲ್ಸಿಯಸ್‌ನವರಗೂ ಇಳಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ

ಹವಾಮಾನ ಇಲಾಖೆಯ ಡೈಲಿ ಬುಲೆಟಿನ್ನಲ್ಲಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಇವತ್ತು ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. 

ದಕ್ಷಿಣ ಒಳನಾಡಿನಲ್ಲಿ ಒಣ ಹವಾಮಾನವು ಮೇಲುಗೈಯಾಗುವ ಸಾಧ್ಯತೆಯಿದೆ. ಒಂದು ಅಥವಾ ಎರಡು ಸ್ಥಳಗಳಲ್ಲಿ ಮಂಜು ಕವಿಯುವ  ಸಾಧ್ಯತೆ ಇದ ಎಂದು ತಿಳಿಸಿದೆ.

SUMMARY | What will be the weather in different districts of the state including Shivamogga? India Meteorological Department Bangalore Report

KEY WORDS  | weather in different districts, Shivamogga ,India Meteorological Department Bangalore Report

Share This Article