ಭದ್ರಾವತಿಯ ಲಾಡ್ಜ್‌ ಈಗ ಅಂದರ್‌ ಬಾಹರ್‌ ಅಡ್ಡೆ | ರೂಮ್‌ನಲ್ಲೆ ನಡೆಯುತ್ತದೆ ಎಕ್ಕಾ ಮಾರ್‌ ಮಾರ್‌!?

13

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 26, 2025 ‌‌ ‌‌

ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ಇಸ್ಪೀಟ್‌ ಹಾವಳಿ ಹೇಗೆಲ್ಲಾ ನಡೆಯುತ್ತಿದೆ ಎಂಬುದನ್ನು ಹೊಸದಾಗಿ ಹೇಳಬೇಕಿಲ್ಲ. ವಿಶೇಷ ಅಂದರೆ, ಕಾಡುಗಳಲ್ಲಿ ಟಾರ್ಪಲ್‌ ಹಾಸಿದ ಜಾಗದಲ್ಲಿ ನಡೆಯುತ್ತಿದ್ದ ಅಂದರ್‌ ಬಾಹರ್‌ ಇದೀಗ ಲಾಡ್ಜ್‌ ಒಳಗೆ ನಡೆಯುತ್ತಿದೆ. ಹೌದು, ಭದ್ರಾವತಿಯಲ್ಲಿ ಇಸ್ಪೀಟ್‌ ಲಾಡ್ಜ್‌ ನ ನಿಗದಿತ ರೂಂಗಳಲ್ಲಿ ನಡೆಯುತ್ತಿದೆ. ಲಾಡ್ಜ್‌ನ ಬೆಡ್‌ ಮೇಲೆ ನಡೆಯುತ್ತಿರುವ ಅಂದರ್‌ ಬಾಹರ್‌ ನ ಫೋಟೋ ದೃಶ್ಯಗಳು ಎಲ್ಲೆಡೆ ಹರಿದಾಡುತ್ತಿದ್ದು, ಇದೀಗ ಮಲೆನಾಡು ಟುಡೆಗೆ ಲಭ್ಯವಾಗಿದೆ.

ಭದ್ರಾವತಿಯ ಎಂಪಿಎಂ, ದೊಡ್ಡೇರಿ , ಬಿಸಿಲುಮನೆ, ಕೆಂಚಮ್ಮನಗುಡ್ಡ, ಶಿವಪುರ, ತಿಮ್ಲಾಪುರ, ಗೊಂದಿ–ಕೈಮರ, ನಂಜಾಪುರ, ಹೊಳೆಹೊನ್ನೂರು, ಜೋಳ್‌ದಾಳ್‌ ಸೇರಿದಂತೆ ಈ ಭಾಗದ ಕಾಡು ಪ್ರದೇಶಗಳಲ್ಲಿ ಟಾರ್ಪಲ್‌ ಹಾಸಿಕೊಂಡು ವಿವಿಧ ತಂಡಗಳು ಇಸ್ಪೀಟ್‌ ಆಡಿಸುತ್ತವೆ. ಅಂದರ್‌ ಬಾಹರ್‌ ಪ್ರಮುಖ ಆಟವಾದರೆ ಅದಕ್ಕೂ ಮೀರಿದ ಆಟಗಳು ಇಲ್ಲಿ ನಡೆಯುತ್ತಿವೆ. ಈ ನಡುವೆ ಗಲಾಟೆ ಹೆಚ್ಚಾಗಿ ಭದ್ರಾವತಿ ವಿಚಾರಗಳು ಇತ್ತೀಚೆಗೆ ಚರ್ಚೆಗೆ ಬಂದಾಗ, ಕೆಲದಿನ ಇಸ್ಪೀಟ್‌ ಬಂದಾಗಿತ್ತು. ಅಲ್ಲದೆ ಪೂರ್ವ ವಲಯ ಐಜಿಪಿಯಾಗಿ ರವಿಕಾಂತೇಗೌಡರು ಬಂದ ಬಳಿಕ ಐಜಿ ಸ್ಕ್ವ್ಯಾಡ್‌ ರೇಡ್‌ನ ಕಾರಣಕ್ಕೆ ಇಸ್ಪೀಟ್‌ ಅಡ್ಡೆಗಳು ಬಂದ್‌ ಆಗಿದ್ದವು.

ಹೀಗೇ ಬಂದ್‌ ಆಗಿದ್ದ ಬಹಿರಂಗ ಇಸ್ಪಿಟ್‌ ಅಡ್ಡೆ ಒಳಗೊಳಗೆ ನಡೆಯಲು ಆರಂಭವಾಗಿದೆ. ಅಂದರೆ, ಆಯ್ದ ಲಾಡ್ಜ್‌ನಲ್ಲಿ ನಿರ್ದಿಷ್ಟ ರೂಂನೊಳಗೆ ಇಸ್ಪಿಟ್‌ ಆಟ ಎಕ್ಕಾ ಮಾರ್‌…ಮಾರ್‌ ಎನುತ್ತಾ ಸಾಗಿದೆ. ಕೆಲದಿನಗಳ ಹಿಂದೆ ಇಸ್ಪೀಟ್‌ ಆಟದ ವಿಡಿಯೊವೊಂದು ವೈರಲ್‌ ಆಗಿತ್ತು. ಇದರ ಬೆನ್ನಲ್ಲೆ ಭದ್ರಾವತಿಯ ರೆಸಿಡೆನ್ಸಿಯೊಂದ ರೂಮ್‌ ನಂಬರ್‌ 131, 132 ರಲ್ಲಿ ಇಸ್ಪೀಟ್‌ ಆಡಿಸುತ್ತಿರುವ ಫೋಟೋಗಳು ಲಭ್ಯವಾಗಿದೆ. ಫೋಟೋದಲ್ಲಿ ಇರುವ ವ್ಯಕ್ತಿಗಳು ಅಂದರ್‌ ಬಾಹರ್‌ನ ಪ್ರಖ್ಯಾತ ಮುಖಗಳಾಗಿದ್ದು, ಲಾಡ್ಜ್‌ನೊಳಗಿನ ಈ ಅಂದರ್‌ ಬಾಹರ್‌ ಲೋಕದ ಬಗ್ಗೆ ಭದ್ರಾವತಿ ಪೊಲೀಸರಿಗೆ ಮಾಹಿತಿ ಇದೆಯಾ? ಇಲ್ಲವೇ ಇನ್ನಷ್ಟೆ ಗೊತ್ತಾಗಬೇಕಿದೆ. 

Share This Article