ಬೊಮ್ಮನಕಟ್ಟೆಯಲ್ಲಿ ಶೆಟ್ಟಿ ಕೊಲೆ! ರಾಜಿ ಮಾಡ್ಕೊಂಡವರು ಕೊಚ್ಚಿ ಕೊಂದರೆ? ಈ ನಗರದಲ್ಲಿ ಏನಾಗುತ್ತಿದೆ?

13

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 1, 2024 ‌ 

ಶಿವಮೊಗ್ಗದ ಹಳೆ ಬೊಮ್ಮನಕಟ್ಟೆಯ ಬಳಿ ನಿನ್ನೆ ಮಧ್ಯಾಹ್ನ ರೌಡಿಶೀಟರ್‌ ಕಪಡಾ ರಾಜೇಶ್‌ ಶೆಟ್ಟಿಯನ್ನ ಬರ್ಬರವಾಗಿ ಕೊಲೆ ಮಾಡಲಾಗಿದೆ. ಈ ಕೊಲೆ ನಡೆದಿರೋದು ಹಳೆಯ ದ್ವೇಷಕ್ಕೆ ಎಂಬುದು ಬಹುತೇಕ ಸ್ಪಷ್ಟವಾಗಿದೆ. 

rajesh shetty

 

ಕರಿಯಾ, ಡಿಂಗಾ, ನೆಪಾಳಿ, ಚಿಟ್ಟೆ, ನಿದ್ದೆ, ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂಬುದು ರೌಡಿಜಗತ್ತಿನಲ್ಲಿ ಕೇಳಿ ಬರುತ್ತಿರುವ ಮಾತು. ಇನ್ನೊಂದೆಡೆ ಆ ನಿಟ್ಟಿನಲ್ಲಿ ಇಡೀ ಪ್ರಕರಣದಲ್ಲಿ ಮತ್ತಾರದ್ದಾದರೂ ಕೈವಾಡ ಇದೆಯೆ? ಎಂಬ ಶಂಕೆಯಲ್ಲಿರುವ ಪೊಲೀಸ್‌ ಇಲಾಖೆ ಇತ್ತೀಚಿನ ಬೆಳವಣಿಗೆಗಳನ್ನ ಕೂಲಂಕುಶವಾಗಿ ಪರಿಶೀಲಿಸ್ತಿದ್ದಾರೆ. ಮೂರು ತಂಡಗಳಾಗಿ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸ್ತಿದ್ದಾರೆ. ಅಂದಹಾಗೆ, ಯಾವೆಗೆಲ್ಲಾ ಶಿವಮೊಗ್ಗ ಪೊಲೀಸ್‌ ಇಲಾಖೆ ಗಮನ ಕಡಿಮೆಯಾಗಿದೆಯೋ, ಆಗೆಲ್ಲವೂ ಸಿಟಿಯಲ್ಲಿ ರೌಡಿ ಜಗತ್ತು ಮಚ್ಚಿನ ಮೂಲಕ ಸದ್ದು ಮಾಡಿದೆ. ಇದೀಗ ರಾಜೇಶ್‌ ಶೆಟ್ಟಿಯ ಕೊಲೆ ಸಹ ಇದಕ್ಕೆ ಪ್ರಸ್ತುತ ಸಾಕ್ಷಿ. 

rajesh shetty

ವಿಚಿತ್ರ ಅಂದರೆ, ಬಹುತೇಕ ರಾಜಿಯಾಗಿದ್ದ ವಿಚಾರ, ಸೇಡಿನ ಪ್ರತಿಕಾರದ ಕೊಲೆಯಾಗಿ ಮಾರ್ಪಾಡಾಗಿದ್ದು ಹೇಗೆ? ಇದೆ ಶೆಟ್ಟಿಕೊಲೆಯಲ್ಲಿ ಗಟ್ಟಿಗೊಳ್ಳುತ್ತಿರುವ ಪ್ರಶ್ನೆ.  ಶೆಟ್ಟಿ ಕೊಲೆಯ ಸೇಡು ಆರಂಭವಾಗಿದ್ದು ಬಿಜೆಪಿಯ ಮುಖಂಡರೊಬ್ಬರ ಸಾವಿನ ಘಟನೆಯಿಂದ. ಅನಾರೋಗ್ಯದಿಂದ ತೀರಿಕೊಂಡಿದ್ದ ಅವರ ಅಂತಿಮದರ್ಶನದ ವೇಳೆ ಶೆಟ್ಟಿ ಹಾಗೂ ಕರಿಯ ವಿನಯ್‌ ನಡುವೆ ಜಗಳವಾಗಿ ಹೊಡೆದಾಟವಾಗಿತ್ತು. ಅವತ್ತಿನ ಹೊಡೆದಾಟಕ್ಕೆ ಕಾರಣ ಸ್ಪಷ್ಟವಿಲ್ಲ. ಆದರೆ ಅದೇ ದಿನ ರಾತ್ರಿ ಶೆಟ್ಟಿ ಲಾಂಗ್‌ ಹಿಡಿದು ಬಂದು ಕರಿಯನ ಮೇಲೆ ಹಲ್ಲೆ ಮಾಡಿದ್ದ. ಈ ಘಟನೆಯಲ್ಲಿ ಕರಿಯ ವಿನಯ್‌ ಹಾಗೂ ಇನ್ನೊಬ್ಬ ಗಾಯಗೊಂಡಿದ್ದ. ಇಬ್ಬರು ಮೆಗ್ಗಾನ್‌ ಆಸ್ಪತ್ರೆಯಲ್ಲಿ ಅಡ್ಮಿಟ್‌ ಆಗಿದ್ರು. ಪ್ರಕರಣ ಕಂಪ್ಲೆಂಟ್‌ ಆಗಿ, ಶೆಟ್ಟಿ ನಿರೀಕ್ಷಿಣಾ ಜಾಮೀನು ಪಡೆದು ಓಡಾಡ್ಕೊಂಡಿದ್ದ. 

rajesh shetty

 

ಇದರ ನಡುವೆ, ಶೆಟ್ಟಿ ಹಾಗೂ ಕರಿಯನ ನಡುವಿನ ಗಲಾಟೆ ಕುರಿತಾಗಿ ರಾಜಿ ಮಾತುಕತೆ ನಡೆದಿತ್ತು. ಹೆಂಡತಿ ಮಕ್ಕಳು ಸಂಸಾರದ ಅಂತಾ ಮಾಡಿಕೊಂಡ ಮೇಲೆ ತೆಪ್ಪಗೆ ಇರಬೇಕು ಎಂದುಕೊಂಡು, ಎರಡು ಕಡೆಯವರು ರಾಜಿ ಮಾತಾಡಿ ಕೈ ಮಿಲಾಯಿಸಿದ್ದರು. ಆದರೆ ಆನಂತರ ಏನಾಯ್ತು? ಹು ಅಂತಾ ಪರಸ್ಪರ ಕೈ ಮಿಲಾಯಿಸಿದವರು, ಸುಳಿವೆ ಕೊಡದೆ ಶೆಟ್ಟಿಯನ್ನ ಏಕೆ ಹೊಡೆದರು. ಇದರ ಹಿಂದೆ ಕುಮ್ಮಕ್ಕಿತ್ತಾ? ಹಾಗಿದ್ದರೆ ಆ ಕಾಣದ ಕೈ ಯಾರದ್ದು? ಸದ್ಯ ಇದೇ ಪ್ರಶ್ನೆಗೆ ಉತ್ತರ ಸಿಗಬೇಕಿದೆ.

Malenadu Today

ಶೆಟ್ಟಿಗೆ ರೀಲ್ಸ್‌ ಹಾಗೂ ವಾಟ್ಸಾಪ್‌ ಸೇಟಸ್‌ ಹಾಕಿಕೊಳ್ಳುವ ಹುಚ್ಚಿತ್ತು, ಅದೇ ಕಾರಣಕ್ಕೆ ಒಮ್ಮೆ ಪೊಲೀಸ್‌ ಸ್ಟೇಷನ್‌ ನಲ್ಲಿ ದಿನವಿಡಿ ಕುಳಿತು ಆಮೇಲೆ ವಾಪಸ್‌ ಆಗಿದ್ದ. ರೋಡಿನಲ್ಲಿ ಬರ್ತಡೆ ಆಚರಿಸಿ ಅದರ ವಿಡಿಯೋ ಫೇಸ್‌ಬುಕ್‌ಗೆ ಹಾಕಿಕೊಂಡಿದ್ದಕ್ಕೆ ಶೆಟ್ಟಿಯನ್ನ ಪೊಲೀಸರು ಕರೆಸಿ ವಿಚಾರಿಸಿದ್ದರು. ಆನಂತರವೂ ವಾಟ್ಸಾಪ್‌ ಸ್ಟೇಟಸ್‌ನಲ್ಲಿ ಪೊಗರ್‌ದಸ್ತ್‌ ವಿಚಾರಗಳನ್ನ ಹಾಕಿಕೊಳ್ತಿದ್ದ ಶೆಟ್ಟಿಯ ವರ್ತನೆಯು ಆತನ ಅಂತ್ಯಕ್ಕೆ ಕಾರಣವಾಯ್ತು ಎನ್ನುವ ಆರೋಪ ಇದೆ. 

Malenadu Today

 

ಅಟ್‌ಲಾಸ್ಟ್‌ , ಶೆಟ್ಟಿ ಸಾವನ್ನಪ್ಪಿದ್ದಾನೆ, ಆತನನ್ನ ಕೊಂದ ಆರೋಪಿಗಳ ಬಂಧನಕ್ಕೆ ಶಿವಮೊಗ್ಗ ಪೊಲೀಸ್‌ ತಲಾಶ್‌ ನಡೆಸ್ತಿದ್ದಾರೆ. ಅವರವರು ಹೊಡೆದುಕೊಳ್ಳುತ್ತಾರೆ, ಸಾಯುತ್ತಾರೆ. ಕೇಸ್‌ ಆಗುತ್ತದೆ, ಆರೋಪಿಗಳು ಅಂದರ್‌ ಆಗುತ್ತಾರೆ. ಪ್ರತಿ ರೌಡಿಶೀಟರ್‌ ಸಾವಿನಲ್ಲಿಯು ನಡೆಯುತ್ತಿರುವುದು ಇಷ್ಟೆ. ಈ ಘಟನೆಗಳ ಬಗ್ಗೆ ಪೊಲೀಸರಷ್ಟೆ ಅಲ್ಲ,  ಯಾರು ಸಹ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ, ಹೊಡೆಬಡಿದು ರಕ್ತ ಹರಿಸುವ ಜಗತ್ತಿನವರಿಗೆ ಅರ್ಥವಾಗಬೇಕಿದೆ. 

Malenadu Today

 

SUMMARY |  Who killed Kapada Rajesh Shetty? Who are the accused? 

 

KEY WORDS  |   Who killed Kapada Rajesh Shetty? Who are the accused? 

Share This Article