SHIVAMOGGA | MALENADUTODAY NEWS | ಮಲೆನಾಡು ಟುಡೆ Dec 11, 2024
ಸುಮಾರು 3 ಕೆ.ಜಿಗೂ ಅಧಿಕ ಹಳೆಯ ಕಾಲದ ನಾಣ್ಯಗಳಿವೆ ಎಂದು ನಂಬಿಸಿ ವ್ಯಕ್ತಿಯೊಬ್ಬರಿಗೆ 5 ಲಕ್ಷ ರೂಪಾಯಿ ಹಣ ವಂಚಿಸಿದ ಘಟನೆ ಶಿವಮೊಗ್ಗದ ಆಯನೂರು ನಲ್ಲಿ ನಡೆದಿದೆ.
ಬೆಂಗಳೂರು ಮೂಲದ ವ್ಯಕ್ತಿ ಶಿವಮೊಗ್ಗದ ಹಾರನಹಳ್ಳಿ ಸಮೀಪ ಬಂದ ಮೋಸ ಹೋದ ಕಥೆಯಿದು. ಬೆಂಗಳೂರಿನ ಇಬ್ರಾಹಿಂ ಎಂಬವರಿಗೆ ಹಳೆಯ ಕಾಲದ ಚಿನ್ನದ ನಾಣ್ಯಗಳಿವೆ. ಅವುಗಳನ್ನ ಅರ್ಧದುಡ್ಡಿಗೆ ಖರೀದಿಸುವುದಾದರೆ ನೀಡುತ್ತೇನೆ ಎನ್ನುವ ಡೀಲ್‌ವೊಂದನ್ನ ಜಸ್ಟ್ ಫೋನ್ ಕಾಲ್‌ನಲ್ಲಿಯೇ ನಡೆಸಲಾಗಿತ್ತು. ಅದರಂತೆ ಶಾಹುಲ್ ಎಂಬಾತ ಇಬ್ರಾಹಿಂರವರನ್ನ ಮೊದಲು ಸವಳಂಗಕ್ಕೆ ಬರಲು ಹೇಳಿ ಕೆಲವು ಸ್ಯಾಂಪಲ್ ನಾಣ್ಯಗಳನ್ನ ನೀಡಿದ್ದಾರೆ. ಅವುಗಳು ವರ್ಜಿನಲ್ ಎಂದು ಗೊತ್ತಾದ ಬಳಿಕ ಇಬ್ರಾಹಿಂ 200 ನಾಣ್ಯಗಳನ್ನ 8 ಲಕ್ಷ ರೂಪಾಯಿಗೆ ನೀಡುವಂತೆ ತಿಳಿಸಿದ್ದಾನೆ. ಅದರಂತೆ ಎರಡನೇ ಸಲ ಆಯನೂರು-ಹಾರನಹಳ್ಳಿ ಗ್ರಾಮದ ಮಧ್ಯೆ ಇರುವ ಶುಂಠಿ ಗೋಡೌನ್‌ನಲ್ಲಿ ಚಿನ್ನದ ನಾಣ್ಯದ ಡೀಲ್ ಮುಗಿಸಿದ್ದಾರೆ.
200 ಕಾಯಿನ್ ಪಡೆದು ಹೋದ ಇಬ್ರಾಹಿಂಗೆ ಬೆಂಗಳೂರಿನಲ್ಲಿ ಅದು ನಕಲಿ ಎಂದು ಗೊತ್ತಾಗಿದೆ. ಆ ಬಳಿಕ ಫೋನ್ ಮಾಡಿದರೆ ಶಾಹುಲ್ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಬೇರೆ ದಾರಿ ಕಾಣದೇ ಶಿವಮೊಗ್ಗದ ಕುಂಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

SUMMARY | Fraud in Ayanur into believing there is an old gold coin
KEY WORDS |Fraud in Ayanur , old gold coin