SHIVAMOGGA | MALENADUTODAY NEWS | ಮಲೆನಾಡು ಟುಡೆ | Mar 1, 2025
ಶಿವಮೊಗ್ಗ | ಲವ್ ಜಿಹಾದ್ ಪುಸ್ತಕವನ್ನು ಬಿಡುಗಡೆ ಮಾಡಲು ಶಿವಮೊಗ್ಗಕ್ಕೆ ಬಂದ ಶ್ರೀರಾಮ ಸೇನೆಯ ಮುಖ್ಯಸ್ಥರಾದ ಪ್ರಮೋದ್ ಮುತಾಲಿಕ್‌ರನ್ನು ತಡೆದಿದ್ದು, ರಾಜ್ಯ ಸರ್ಕಾರ ಹಿಂದೂ ಸಮಾಜಕ್ಕೆ ಮಾಡಿದ ಅಪಮಾನವಾಗಿದೆ ಎಂದು ಶಿವಮೊಗ್ಗ ನಗರ ಶಾಸಕ ಎಸ್ ಎನ್ ಚೆನ್ನಬಸಪ್ಪ ಆರೋಪಿಸಿದರು.
ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ರಾಜ್ಯ ಸರ್ಕಾರ ಹಿಂದೂ ನಾಯಕರನ್ನು ಜಿಲ್ಲೆಯ ಒಳಗಡೆ ಬಿಡದೆ ನಿರ್ಭಂದ ಹೇರುವ ಕೆಲಸ ಮಾಡುತ್ತಿದೆ. ಪ್ರಮೋದ್ ಮುತಾಲಿಕ್‌ರವರು ಇಲ್ಲಿಗೆ ಯಾವ ಉದ್ದೇಶಕ್ಕೆ ಬಂದಿದ್ದಾರೆ ಎಂದು ಪೊಲೀಸರು ಯೋಚನೆ ಮಾಡಲಿಲ್ಲ. ಅವರಿಗೆ ನಿರ್ಭಂಧ ಹೇರುವ ಮೊದಲು ಅವರಿಗೆ ಒಂದು ನೋಟೀಸ್ ಕಳುಹಿಸಬೇಕಿತ್ತು. ಆದರೆ ಆಡಳಿತ ಆ ಕೆಲಸವನ್ನು ಮಾಡಲಿಲ್ಲ. ಪ್ರಮೋದ್ ಮುತಾಲಿಕ್ ಮಾಡಿದ ಅಪರಾದವಾದರೂ ಏನು. ಇದುವರೆಗೆ ಅವರ ಮೇಲೆ ಬಿದ್ದ ಕೇಸ್‌ಗಳೆಲ್ಲಾ ವಾಪಾಸ್ ಹೋಗಿದೆ. ಅಂಥಹ ನಾಯಕರನ್ನು ತಡೆದಿದ್ದೀರಿ ಎಂದರೆ ನಿಮಗೆ ಏನು ಹೇಳಬೇಕು. ಪ್ರಮೋದ್ ಮುತಾಲಿಕ್‌ರವರೇನು ಇಲ್ಲಿ ಬೆಂಕಿ ಹಚ್ಚಲು ಬಂದಿಲ್ಲ. ಹಾಗೆ ಬಂದಿದ್ದರೆ ಅವರನ್ನು ನಾವೇ ಬರಲು ಬಿಡುತ್ತಿರಲಿಲ್ಲ. ರಕ್ಷಣಾಧಿಕಾರಿಗಳು ಯಾರನ್ನು ತೃಪ್ತಿಪಡಿಸಲು ಈ ಕೆಲಸ ಮಾಡುತ್ತಿದ್ದೀರ ಎಂದು ಪ್ರಶ್ನಿಸಿದರು.

ಡ್ರಗ್ ಮಾಫಿಯಾ ಮಾಡುವವರನ್ನು ಬಿಡುತ್ತೀರಿ, ಪುಸ್ತಕ ಬಿಡುಗಡೆ ಮಾಡಲು ಬಂದವರನ್ನು ತಡೆಯುತ್ತೀರಿ.
ರಾಜ್ಯ ಸರ್ಕಾರ ಪುಸ್ತಕ ಮೇಳವನ್ನು ಮಾಡುತ್ತದೆ ಆದರೆ ಇಲ್ಲಿ ಪುಸ್ತಕ ಬಿಡುಗಡೆ ಮಾಡಲು ಬಂದವರನ್ನು ತಡೆಯುತ್ತದೆ. ಅಷ್ಟೇ ಅಲ್ಲದೆ ಜಿಲ್ಲೆಯಲ್ಲಿ ಡ್ರಗ್ ಮಾಫಿಯಾ ಮರಳು ದಂಧೆ ಸೇರಿದಂತೆ ಇನ್ನಿತರೆ ಅನಾಚಾರ ಮಾಡುವವರನ್ನು ಬಿಡುತ್ತೀರಿ. ಆದರೆ ಪುಸ್ತಕ ಬಿಡುಗಡೆಗೆ ಬಂದವರನ್ನು ತಡೆಯುತ್ತೀರ. ಲವ್ ಜಿಹಾದ್ ಪುಸ್ತಕ ಈಗಾಗಲೇ 4 ಜಿಲ್ಲೆಯಲ್ಲಿ ಬಿಡುಗಡೆಯಾಗಿದೆ. ಆದರೆ ಯಾವ ಜಿಲ್ಲೆಯಲ್ಲಿಯೂ ಈ ಪುಸ್ತಕವನ್ನು ಬಿಡುಗಡೆ ಮಾಡಬಾರದೆಂದು ನಿಷೇದ ಹೇರಿಲ್ಲ. ಆದರೆ ಶಿಮೊಗ್ಗದಲ್ಲಿ ಮಾತ್ರ ಈ ಪುಸ್ತಕ ಬಿಡುಗಡೆಗೆ ಏಕೆ ತಡೆಯುತ್ತಿದ್ದೀರಿ. ಲವ್ ಜಿಹಾದ್ ಪುಸ್ತಕ ಬಿಡುಗಡೆ ಮಾಡುವುದು ತಪ್ಪಾ ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದರು.
SUMMARY | Shivamogga city MLA S N Chennabasappa alleged that the state government’s decision to stop Pramod Muthalik was an insult to the Hindu society.
KEYWORDS | Shivamogga city, S N Chennabasappa, Pramod Muthalik, Hindu,
