SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 3, 2024
ಕಾಂತಾರ ಚಿತ್ರದ ಮೂಲಕ ಜಗತ್ತಿನಾದ್ಯಂತ ಜನಮನ್ನಣೆ ಗಳಿಸಿದ ರಿಷಬ್ ಶೆಟ್ಟಿ ಇದೀಗ ದಿ ಪ್ರೈಡ್ ಆಫ್ ಭಾರತ್ ಛತ್ರಪತಿ ಶಿವಾಜಿ ಮಹಾರಾಜ್ ಎಂಬ ಬಾಲಿವುಡ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಬಾಲಿವುಡ್ ನಿರ್ದೇಶಕ ಸಂದೀಪ್ ಸಿಂಗ್ ನಿರ್ದೇಶಿಸಲಿರುವ ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಶಿವಾಜಿ ಮಹಾರಾಜ್ ಪಾತ್ರ ನಿರ್ವಹಿಸುತ್ತಿದ್ದು, ಅದರ ಪೋಸ್ಟರ್ ವೈರಲ್ ಆಗಿದೆ. ಈ ಚಿತ್ರದ ಪೋಸ್ಟರ್‌ನ್ನು ರಿಷಬ್ ಶೆಟ್ಟಿ ತನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವ ಮೂಲಕ ಇದರ ಬಗ್ಗೆ ಮಾಹಿತಿ ನೀಡಿದ್ದಾರೆ.

ಇದು ಕೇವಲ ಚಲನಚಿತ್ರವಲ್ಲ ಇದು ಎಲ್ಲಾ ಅಡೆತಡೆಗಳ ವಿರುದ್ಧ ಹೋರಾಡಿದ ಪ್ರಬಲ ಮೊಘಲ್ ಸಾಮ್ರಾಜ್ಯದ ಶಕ್ತಿಗೆ ಸವಾಲೆಸೆದ ಮತ್ತು ಎಂದಿಗೂ ಮರೆಯಲಾಗದ ಪರಂಪರೆಯನ್ನು ರಚಿಸಿದ ಯೋಧನನ್ನು ಗೌರವಿಸುವ ಯುದ್ಧದ ಕೂಗು. ಈ ಚಿತ್ರವನ್ನು ಜನವರಿ 21 2027 ರಂದು ಬಿಡುಗಡೆ ಮಾಡುತ್ತಿದ್ದೇವೆ, ಇತರ ಯಾವುದೇ ಚಿತ್ರಗಳಿಗಿಂತ ಭಿನ್ನವಾಗಲಿರುವ ಈ ಆಕ್ಷನ್ ಡ್ರಾಮಾ ನೋಡಲು ಸಿದ್ಧರಾಗಿ ಎಂದು ರಿಷಬ್ ಶೆಟ್ಟಿ ಕ್ಯಾಪ್ಷನ್ ಹಾಕಿದ್ದಾರೆ.
ಈ ಹಿಂದೆಯೂ ಸಹ ರಿಷಬ್ ಶೆಟ್ಟಿ ಸದ್ದಿಲ್ಲದೆ ತೆಲುಗಿನ ಹನುಮಾನ್ 2 ಚಿತ್ರದಲ್ಲಿ ನಟಿಸುವುದರ ಬಗ್ಗೆ ಪೋಸ್ಟರ್ ಮೂಲಕ ಮಾಹಿತಿ ಹಂಚಿಕೊಂಡಿದ್ದರು. ಇದೀಗ ದಿ ಪ್ರೈಡ್ ಆಫ್ ಭಾರತ್ ಛತ್ರಪತಿ ಶಿವಾಜಿ ಮಹಾರಾಜ್ ಎಂಬ ಚಿತ್ರದಲ್ಲಿ ನಟಿಸುವುದರ ಬಗ್ಗೆ ಪೋಸ್ಟರ್ ಹಂಚಿಕೊಂಡಿದ್ದು, ಈ ಪೋಸ್ಟರ್ ನೋಡಿದ ಅವರ ಅಭಿಮಾನಿಗಳು ತಮ್ಮದೇ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
SUMMARY | Rishab Shetty,is currently acting in a Bollywood film titled The Pride of Bharat Chhatrapati Shivaji Maharaj
KEYWORDS | Rishab Shetty, ‘Kantara, Bollywood, The Pride of Bharat Chhatrapati Shivaji Maharaj,