SHIVAMOGGA | MALENADUTODAY NEWS | ಮಲೆನಾಡು ಟುಡೆ | Feb 7, 2025
ಶಿವಮೊಗ್ಗ | ಫಸ್ಟ್‌ಲ್ಯಾಂಕ್ ರಾಜು ಖ್ಯಾತಿಯ ಗುರುನಂದನ್ ನಾಯಕರಾಗಿ ನಟಿಸಿರುವ ರಾಜು ಜೇಮ್ಸ್ ಬಾಂಡ್ ಚಿತ್ರ ಇದೇ ತಿಂಗಳ 14 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಚಿತ್ರದ ನಟ ಗುರುನಂದನ್ ಚಿತ್ರದಲ್ಲಿ ನಾಯಕ ಅಣ್ಣಾವ್ರ ಅಭಿಮಾನಿ, ಅವರ ಬಾಂಡ್ ಶೈಲಿಯ ಚಿತ್ರಗಳನ್ನು ನೋಡುತ್ತ ಅದೇ ವ್ಯಕ್ತಿತ್ವವನ್ನು ತನ್ನ ಜೀವನದಲ್ಲಿಯೂ ಸಹ ಮೈಗೂಡಿಸಿಕೊಂಡಿರುತ್ತಾನೆ. ಬ್ಯಾಂಕ್ ಮ್ಯಾನೇಜರ್ ಆಗಬೇಕೆಂದು ಹೊರಟ ಆತನಿಗೆ ಜೀವನದಲ್ಲಿ ಎದುರಾಗುವ ಹಲವಾರು ಸಂದಿಗ್ಧ ಪರಿಸ್ಥಿತಿಗಳನ್ನು ಹೇಗೆ ನಿಭಾಯಿಸಿ ಜೇಮ್ಸ್ ಬಾಂಡ್ ಆಗುತ್ತಾನೆ ಎನ್ನುವುದೇ ಈ ಚಿತ್ರದ ಕಥಾಹಂದರ. ನಿರ್ದೇಶಕರಾದ ದೀಪಕ್ ಮಧುವನಹಳ್ಳಿ ಅತ್ಯುತ್ತಮವಾಗಿ ಚಿತ್ರವನ್ನು ನಿರ್ದೇಶಿಸಿದ್ದಾರೆ ಎಂದರು.
ನಿರ್ದೇಶಕ ದೀಪಕ್ ಮಧುವನಹಳ್ಳಿ ಮಾತನಾಡುತ್ತ ರಾಜು ಜೇಮ್ಸ್ ಬಾಂಡ್ ನನ್ನ ನಿರ್ದೇಶನದ ಮೂರನೇ ಚಿತ್ರ ವಿಭಿನ್ನವಾದ ಕಥಾಹಂದರವನ್ನು ಈ ಚಿತ್ರದಲ್ಲಿ ಟ್ರೈ ಮಾಡಿದ್ದೇವೆ, ಮಂಜುನಾಥ್ ವಿಶ್ವಕರ್ಮ ಹಾಗೂ ಕಿರಣ್ ಬರ್ತೂರು ಅವರು ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಲಂಡನ್ ನಲ್ಲಿ 21 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ ಎಂದು ಹೇಳಿದರು.
ನಾಯಕ ಗುರುನಂದನ್ ಮಾತನಾಡಿ ದೀಪಕ್ ಮಧುವನಹಳ್ಳಿ ಅವರು ಒಂದೊಳ್ಳೆ ಕಥೆಯನ್ನು ಮಾಡಿಕೊಂಡಿದ್ದರು. ನಿರ್ಮಾಪಕ ಮಂಜು ವಿಶ್ವಕರ್ಮ ಹಾಗೂ ಕಿರಣ್ ಬರ್ತೂರ್ ಅವರು ಯಾವುದೇ ಕೊರತೆ ಬಾರದಂತೆ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ನಾನು ಈ ಹಿಂದೆ ಮಾಡಿದ ಎಲ್ಲಾ ಚಿತ್ರಗಳಿಗಿಂತ ಈ ಚಿತ್ರದ ಪಾತ್ರ ವಿಭಿನ್ನವಾಗಿರುತ್ತದೆ. ಅನೂಪ್ ಸೀಳಿನ್ ಅವರ ಸಂಗೀತದಲ್ಲಿ ಮೂಡಿಬಂದಿರುವ ಎಲ್ಲಾ ಹಾಡುಗಳು ಚೆನ್ನಾಗಿದೆ ಎಂದು ತಿಳಿಸಿದರು.
ನಿರ್ಮಾಪಕರಾದ ಕಿರಣ್ ಬರ್ತೂರು ಮಾತನಾಡಿ ರಾಜು ಜೇಮ್ಸ್ ಬಾಂಡ್ ಒಂದೊಳ್ಳೆ ಚಿತ್ರ. ಮುಂದೆಯೂ ಸಹ ಇನ್ನಷ್ಟು ಉತ್ತಮ ಚಿತ್ರಗಳನ್ನು ನಿರ್ಮಾಣ ಮಾಡುವ ಯೋಜನೆಯಿದೆ. ಈ ಚಿತ್ರವನ್ನು ನಿರ್ಮಿಸುವಾಗ ನಾವು ಬಜೆಟ್ ನ್ನು ತಲೆಯಲ್ಲಿಟ್ಟುಕೊಂಡು ಚಿತ್ರವನ್ನು ನಿರ್ಮಿಸಲಿಲ್ಲ. ಏಕೆಂದರೆ ಬಜೆಟ್ ಹಿಂದೆ ಹೋದರೆ ಚಿತ್ರ ಹೆಚ್ಚು ರಿಚ್ ಆಗಿ ಬರುವುದಿಲ್ಲ ಎಂದರು
ಈ ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು, ಅನೂಪ್ ಸೀಳಿನ್ ಅವರು ಸಂಗೀತ ದಂಯೋಜಿಸಿದ್ದಾರೆ. ಮನೋಹರ್ ಜೋಶಿ ಅವರು ಛಾಯಾಗ್ರಹಣ ನಿರ್ವಹಿಸಿದ್ದಾರೆ. ಗುರುನಂದನ್ ಜೊತೆ ನಾಯಕಿಯಾಗಿ ಮೃದಲ ನಟಿಸಿದ್ದು, ರವಿಶಂಕರ್, ಸಾಧು ಕೋಕಿಲ, ಅಚ್ಯುತ್ ಕುಮಾರ್, ಚಿಕ್ಕಣ್ಣ, ಸೇರಿದಂತೆಮುಂತಾದವರು ಚಿತ್ರದ ಪ್ರಮುಖ ತಾರಾಬಳಗದಲ್ಲಿದ್ದಾರೆ. ಈ ಚಿತ್ರ ಕರ್ನಾಟಕದಲ್ಲಿ 200 ಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ರಿಲೀಸ್ ಆಗಲಿದೆ ಎಂದರು.
SUMMARY | First Rank Raju fame Gurunandan starrer Raju James Bond is all set to release across the state on The 14th of this month.
KEYWORDS | Gurunandan, James Bond, movie,