ಪುಟ್ಟ ಮಕ್ಕಳ ಜೊತೆಯಲ್ಲಿ ಹೆಚ್‌ ಎಸ್‌ ಸುಂದರೇಶ್‌ ಹುಟ್ಟುಹಬ್ಬ | ಹೇಗೆಲ್ಲಾ ಆಚರಿಸಿದ್ರು ಗೊತ್ತಾ ಬರ್ತ್‌ಡೇ

13

SHIVAMOGGA | MALENADUTODAY NEWS 

- Advertisement -

ಮಲೆನಾಡು ಟುಡೆ ಡಿಜಿಟಲ್‌ ನ್ಯೂಸ್‌ ಮೀಡಿಯಾ 

Sep 19, 2024  

ಕಾಂಗ್ರೆಸ್ ಮುಖಂಡ ಹಾಗು ಸೂಡ ಅಧ್ಯಕ್ಷರಾಗಿರುವ ಹೆಚ್ ಎಸ್ ಸುಂದರೇಶ್ ಹುಟ್ಟುಹಬ್ಬವನ್ನ ಅವರ ಅಭಿಮಾನಿ ಬಳಗ ಜೋರಾಗಿ ಆಚರಿಸುತ್ತಿದೆ. ಕಳೆದ ಎರಡು ದಿನಗಳಿಂದ ವಿವಿಧ ಕಾರ್ಯಕ್ರಮಗಳನ್ನ ಸುಂದರೇಶ್‌ ರವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಕೈಗೊಳ್ಳಲಾಗುತ್ತಿದೆ. 

Malenadu Today

ವೃದ್ಧಾಶ್ರಮ ಅನಾಥಾಶ್ರಮ ಅಂದರ ವಿಕಾಸ ಕೇಂದ್ರಗಳಲ್ಲಿ ಹುಟ್ಟುಹಬ್ಬ ಆಚರಿಸಿ, ಹಣ್ಣು ಬಟ್ಟೆ ಹಾಗು ಊಟದ ವಿತರಣೆ ಮಾಡುತ್ತಿದ್ದಾರೆ. ನೆನ್ನೆ ಜೀವನ ಸಂಜೆ ವೃದ್ಧಾಶ್ರಮ, ಶಾರದದೇವಿ ಅಂಧರ ವಿಕಾಸ ಕೇಂದ್ರದಲ್ಲಿ ಸುಂದರೇಶ್ ಹುಟ್ಟುಹಬ್ಬ ಆಚರಿಸಿಕೊಂಡು ಮಕ್ಕಳಿಗೆ ಊಟ ಬಡಿಸಿದರು

Malenadu Today

ಆಶಾ ಕಿರಣ ಬುದ್ದಿಮಾಂದ್ಯ ಆಶ್ರಮಕ್ಕೆ ಭೇಟಿ ನೀಡಿ ಅಲ್ಲಿನ ಮಕ್ಕಳೊಂದಿಗೆ ಸರಳವಾಗಿ ಹುಟ್ಟುಹಬ್ಬ ಆಚರಿಸಿದರು.ತದ ನಂತರ ಗುಡ್ ಲಕ್ ಆರೈಕೆ ಕೇಂದ್ರ ಕ್ಕೆ ಭೇಟಿ ನೀಡಿದ ಸುದರೇಶ್ ಅಭಿಮಾನಿ ಬಳಗ ಅಲ್ಲಿ  ತಮ್ಮ ನಾಯಕರ ಹುಟ್ಟುಹಬ್ಬವನ್ನ ಆಚರಿಸಿತು

Malenadu Today

ಇದಾದ ಬಳಿಕ ತಾಯಿಮನೆ ಅನಾಥ ಮಕ್ಕಳ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಮಕ್ಕಳೊಂದಿಗೆ ಕೆಲಕಾಲ ಕಳೆದು, ಊಟ ಮಾಡಿದರು. ನೋವಾ ಚಾರಿಟಬಲ್ ಟ್ರಸ್ಟ್ ನ ಬುದ್ದಿಮಾಂದ್ಯ ಮಕ್ಕಳೊಂದಿಗೆ ಬೆರೆತ ಸುಂದರೇಶ್ ನೆರವಿನ ಭರವಸೆಯನ್ನು ನೀಡಿದರು. 

Malenadu Today

ಇಂದು ಅಭಿಮಾನಿ ಬಳಗ ಸುಂದರೇಶ್ ಹುಟ್ಟು ಹಬ್ಬದ ಅಂಗವಾಗಿ ಮೆಗ್ಗಾನ್ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿತ್ತು.ಗೋಪಾಳದ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡ ಸುಂದರೇಶ್ ದೇವರ ಆಶಿರ್ವಾದವನ್ನು ಪಡೆದರು. 

Malenadu Today

ಬಂಧಿ ಮಿತ್ರ ಡಾ.ಪಿ ರಂಗನಾಥ್‌ IS BACK | ಶಿವಮೊಗ್ಗ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರಾಗಿ ಅಧಿಕಾರ ಸ್ವೀಕಾರ | ಬದಲಾವಣೆಗೆ ಕಾರಣ ಗೊತ್ತಾ?

ಅಪರಾಧಿಗಳ ಚಿನ್ನದಗಣಿಗಳಿಗೆ ಗಡಿಪಾರಿನ ಶಿಕ್ಷೆ | ಪೊಲೀಸ್‌ ಇಲಾಖೆ ಮುಟ್ಟಿದವರಿಗೆ ಶಾಕ್‌ | ಮೊದಲೇ ಹೇಳಿತ್ತು ಮಲೆನಾಡು ಟುಡೆ

 

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ 

 

Share This Article