SHIVAMOGGA | MALENADUTODAY NEWS | ಮಲೆನಾಡು ಟುಡೆ Feb 24, 2025

ಸುದ್ದಿ 1: ಮನೆಗೆ ನುಗ್ಗಿ ಹಲ್ಲೆ | ಶಿವಮೊಗ್ಗ ವಿನೋಬನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರು ಮನೆಯಲ್ಲಿದ್ದ ಸಂದರ್ಭದಲ್ಲಿ ಅವರ ಸಂಬಂಧಿ ಮಹಿಳೆ ಹಾಗೂ ಸಂಘಟನೆಯೊಂದರ ಹೆಸರು ಹೇಳಿಕೊಂಡು ಬಂದ ಮಹಿಳೆಯರು ಹಾಗೂ ಪುರುಷರು ಮನೆಗೆ ಅಕ್ರಮ ಪ್ರವೇಶ ಮಾಡಿದ್ದಷ್ಟೆ ಅಲ್ಲದೆ ಅಲ್ಲಿದ್ದ ಮಹಿಳೆಯ ಮೇಲೆ ಹಲ್ಲೆ ಮಾಡಿ ನಿಂದಿಸಿ, ಕೊಲೆ ಬೆದರಿಕೆ ಹಾಕಿದ ಘಟನೆ ನಡೆದಿದೆ. ಈ ಸಂಬಂಧ ಮಹಿಳೆ ನೀಡಿದ ದೂರಿನನ್ವಯ FIR ದಾಖಲಾಗಿದೆ.
ಸುದ್ದಿ 2 : ಬಂಕ್ ಪಾಟ್ನರ್ಶಿಫ್ನಲ್ಲಿ ವಂಚನೆ ಆರೋಪ | ಮುಡುಬಾದಲ್ಲಿನ ಪೆಟ್ರೋಲ್ ಬಂಕ್ ಒಂದರ ವಿಚಾರದ ವಹಿವಾಟಿನಲ್ಲಿ ವತ್ಯಾಸವಾಗಿದ್ದು ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ. ಇಲ್ಲಿನ ಪೆಟ್ರೋಲ್ ಬಂಕ್ ವೊಂದದರಲ್ಲಿ ಪಾಟ್ನರ್ಶಿಫ್ ನೀಡುವುದಾಗಿ ಹೇಳಿ 30 ಲಕ್ಷ ರೂಪಾಯಿ ಪಡೆದು ಆನಂತರ, ಹಣ ವಾಪಸ್ ನೀಡುವ ಒಪ್ಪಂದ ಮಾಡಿಕೊಳ್ಳಲಾಗಿತ್ತಂತೆ. ಆದರೆ ಎರಡು ಮೂರು ತಿಂಗಳು ಹಣ ಕೊಟ್ಟು ಆನಂತರ ಬೆದರಿಕೆ ಹಾಕುತ್ತಿದ್ದಾರೆ ಎಂಬುದು ಆರೋಪ. ಈ ವಿಚಾರವಾಗಿ ಸಂತ್ರಸ್ತರು ನೀಡಿದ ದೂರಿನನ್ವಯ ಕೇಸ್ ದಾಖಲಾಗಿದೆ.
ಸುದ್ದಿ 3: ಡ್ರಾಫ್ ಕೇಳಿದವರಿಂದ ಹಲ್ಲೆ | ಭದ್ರಾವತಿ ಓಲ್ಡ್ ಟೌನ್ ವ್ಯಾಪ್ತಿಯ ಸೀಗೆಬಾಗಿಯಲ್ಲಿ ಬೈಕ್ನಲ್ಲಿ ಡ್ರಾಪ್ ಪಡೆದುಕೊಂಡು ಬಂದವರು ಬೈಕ್ ಸವಾರರ ಮೇಲೆ ಹಲ್ಲೆ ಮಾಡಿ ಮೊಬೈಲ್ ಕಿತ್ತುಕೊಂಡ ಘಟನೆ ನಡೆದಿದೆ. ಇಲ್ಲಿನ ಎಣ್ಣೆ ಅಂಗಡಿಯಲ್ಲಿ ಮದ್ಯ ಖರೀದಿಸಲು ಫೋನ್ ಪೇ ಮಾಡಿದ ನಾಲ್ವರು ಬಳಿಕ ಬೈಕ್ನಲ್ಲಿ ಡ್ರಾಫ್ ಕೇಳಿದ್ದರು. ಅದರಂತೆ ಎರಡು ಬೈಕ್ಗಳಲ್ಲಿ ಅಪರಿಚಿತರಿಗೆ ಡ್ರಾಫ್ ಕೊಡುವಾಗ, ನಾಲ್ವರು ತಮ್ಮೊಂದಿಗೆ ಇನ್ನಷ್ಟು ಕುಡಿಯುವಂತೆ ಆಹ್ವಾನ ನೀಡಿದ್ದರು. ಅವರೊಂದಿಗೆ ಹೋದ ಸಂದರ್ಭದಲ್ಲಿ ಇಬ್ಬರು ಬೈಕ್ ಸವಾರರ ಮೇಲೆ ನಾಲ್ವರು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದರು ಎಂಬುದು ದೂರು.

ಸುದ್ದಿ 4: ಮಕ್ಕಳಿಗೂ ಬೇಕು ಹೆಲ್ಮೆಟ್ | ಶಿವಮೊಗ್ಗ ಪೊಲೀಸ್ ಇಲಾಖೆ ಶಿವಮೊಗ್ಗ ಟ್ರಾಫಿಕ್ ಪೊಲೀಸರು ಬೈಕ್ ಓಡಿಸುವಾಗ, ಶಿವಮೊಗ್ಗದಲ್ಲಿ ನಾಲ್ಕು ವರ್ಷದೊಳಗಿನ ಮಕ್ಕಳಿಗೆ ಹೆಲ್ಮೆಟ್ ಹಾಕಿಸುವಂತೆ ಪೋಷಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ ಈ ಸಂಬಂಧ ಶಿವಮೊಗ್ಗ ಸಂಚಾರ ವೃತ್ತದ ಪೊಲೀಸ್ ಇನ್ಸ್ ಪೆಕ್ಟರ್ ಸಂತೋಷ ಕುಮಾರ್ ಡಿ.ಕೆ ಶಾಲೆಯ ಹತ್ತಿ ಪೋಷಕರಿಗೆ ತಮ್ಮ ದ್ವಿಚಕ್ರ ವಾಹನದಲ್ಲಿ ಅಥವಾ ತಮ್ಮ ಜೊತೆಯಲ್ಲಿ 09 ತಿಂಗಳಿನಿಂದ ಹಿಡಿದು 4 ವರ್ಷದೊಳಗಿನ ಮಕ್ಕಳನ್ನು ಕರೆದೊಯ್ಯುವ ಸಂದರ್ಭದಲ್ಲಿ ಮಕ್ಕಳಿಗೆ HELMET ಮತ್ತು SAFETY HARNESS ಅನ್ನು ಕಡ್ಡಾಯವಾಗಿ ಬಳಕೆ ಮಾಡುವ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.
ಸುದ್ದಿ 5: ಸಾಂಬರ್ ಮಾಡುತ್ತಿದ್ದಾಗ ಸಿಲಿಂಡರ್ ಸ್ಫೋಟ | ಶಿವಮೊಗ್ಗ ನಗರದ ಕೋಟೆ ಗಂಗೂರಿನಲ್ಲಿ ಇವತ್ತು ಬೆಳಗ್ಗೆ ಮನೆಯಲ್ಲಿ ಸಾಂಬರ್ ಮಾಡುತ್ತಿದ್ದ ವೇಳೆ ಸಿಲಿಂಡರ್ ಸ್ಫೋಟಗೊಂಡಿದೆ. ಇಲ್ಲಿನ ಲೇಬರ್ಸ್ ಕಾಲೋನಿಯ ಮನೆಯೊಂದರಲ್ಲಿ ಘಟನೆ ನಡೆದಿದೆ. ಮೊದಲು ರೆಗ್ಯುಲೇಟರ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ನೋಡಿದ ಮನೆಯವರು ಮನೆಯಿಂದ ಹೊರಕ್ಕೆ ಬಂದಿದ್ದಾರೆ. ಆನಂತರ ಸಿಲಿಂಡರ್ ಸ್ಫೋಟಗೊಂಡಿದೆ. ಪರಿಣಾಮ ಮನೆಯ ಗೋಡೆ ಕುಸಿದಿದೆ.
SUMMARY | Shivamogga Fast news
KEY WORDS | Shivamogga Fast news