ಪಿಡಿಓ ಪರೀಕ್ಷೆಯಲ್ಲಿ ಅಕ್ರಮ | ಅಭ್ಯರ್ಥಿಯ ಬಂಧನ

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Dec 9, 2024

ತುಮಕೂರಿನಲ್ಲಿ ಗ್ರಾಮೀಣ ಅಭಿವೃದ್ಧಿ ಅಧಿಕಾರಿ (ಪಿಡಿಓ) ನೇಮಕಾತಿ ಪರೀಕ್ಷೆ ವೇಳೆ ಬ್ಲೂಟೂತ್ ಬಳಸಿ ಅಕ್ರಮದಲ್ಲಿ ಭಾಗಿಯಾಗಿದ್ದ  ಅಭ್ಯರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ.

ಡಿಸೆಂಬರ್ 8 ರಂದು ನಡೆದ ಪಿಡಿಓ ಪರೀಕ್ಷೆಯ ವೇಳೇ, ತುಮಕೂರಿನ ಲಾ ಕಾಲೇಜ್‌ನಲ್ಲಿ  ಬ್ಯೂಟೂತ್‌ ಬಳಸಿ ಅಕ್ರಮವೆಸಗಿದ್ದು ಕಂಡು ಬಂದಿದೆ. 

ಬೆಂಗಳೂರಿನ ರಾಮಮೂರ್ತಿ ನಗರದ ಅಭ್ಯರ್ಥಿಯೊಬ್ಬ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಸಿ ಅಕ್ರಮವೆಸಗಿದ್ದಾನೆ. ಇದನ್ನು ಕ್ಯಾಮರಾ ಕಂಟ್ರೋಲ್ ರೂಮ್ ನಲ್ಲಿ ಕೂತು ವೀಕ್ಷಿಸುತ್ತಿದ್ದ ಸಿಬ್ಬಂದಿ ಗಮನಿಸಿದ್ದಾರೆ. ಕೂಡಲೇ ಬಂದು ಆತನನ್ನು ವಿಚಾರಿಸಿದಾಗ ಆತ ಏನೂ ನೆಪ ಹೇಳಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಅನುಮಾನಗೊಂಡ ಸಿಬ್ಬಂದಿ ಆತನನ್ನು ಪೋಲೀಸರಿಗೆ ಒಪ್ಪಿಸಿದ್ದಾರೆ.  ಆತನನ್ನ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ.

SUMMARY | Police have arrested a candidate for allegedly using Bluetooth during the Rural Development Officer (PDO) recruitment exam

 

KEYWORDS | Tumkur, PDO,   Bluetooth, kannadanews,

Share This Article