SHIVAMOGGA | MALENADUTODAY NEWS | ಮಲೆನಾಡು ಟುಡೆ Nov 24, 2024
ಹೆಬ್ರಿ ತಾಲ್ಲೂಕು ನಾಡ್ಪಾಲಿನ ಪೀತುಬೈಲ್‌ನಲ್ಲಿ ನಡೆದ ವಿಕ್ರಂಗೌಡನ ಎನ್‌ಕೌಂಟರ್ ಪ್ರಕರಣ ಸಂಬಂಧ ನಕ್ಸಲ್ ಪುನರ್ ವಸತಿ ಮತ್ತು ಶರಣಾಗತಿ ಸಮಿತಿ ಘಟನಾ ಸ್ಥಳಕ್ಕೆ ಭೇಟಿಕೊಟ್ಟಿದೆ.

ನಕ್ಸಲ್ ಪುನರ್ ವಸತಿ ಮತ್ತು ಶರಣಾಗತಿ ಸಮಿತಿ ಸದಸ್ಯ ವಕೀಲ ಶ್ರೀಪಾಲ್ ಕೆ.ಪಿ. ಪತ್ರಕರ್ತ ಪಾರ್ವತೀಶ ಬಿಳಿದಾಳೆ ನಿನ್ನೆದಿನ ಶನಿವಾರ ಸ್ಥಳಕ್ಕೆ ಭೇಟಿಕೊಟ್ಟರು.
ಈ ವೇಳೆ ಅಲ್ಲಿನ ಎಎನ್‌ಎಫ್ ಸಿಬ್ಬಂದಿ ಹಾಗೂ ಸ್ಥಳೀಯ ಕುಟುಂಬಸ್ಥರ ಜೊತೆಗೆ ಚರ್ಚಿಸಿದ ಸದಸ್ಯರು ಪ್ರಮುಖ ಮಾಹಿತಿಯನ್ನ ಕಲೆಹಾಕಿದ್ದಾರೆ. ಆ ಬಳಿಕ ಮಾತನಾಡಿದ ವಕೀಲ ಕೆಪಿ ಶ್ರೀಪಾಲ್ ನಕ್ಸಲರು ಶರಣಾಗತಿ ಬಯಸಿದರೆ ನಕ್ಸಲ್ ಪುನರ್ ವಸತಿ ಮತ್ತು ಶರಣಾಗತಿ ಸಮಿತಿ ಸದಸ್ಯರನ್ನ ಸಂಪರ್ಕಿಸಬಹುದು. ಮುಖ್ಯವಾಹಿನಿಗೆ ಬರುವುದಾದರೆ ಪ್ರತಿಯೊಂದನ್ನ ವ್ಯವಸ್ಥೆ ಮಾಡುತ್ತೇವೆ ಎಂದಿದ್ದಾರೆ.

ಇನ್ನೂ ವಿಕ್ರಂಗೌಡನ ಎನ್‌ಕೌಂಟರ್ ಬಗ್ಗೆ ನ್ಯಾಯಾಂಗ ತನಿಖೆಗೆ ಆಗ್ರಹ ಕೇಳಿಬರುತ್ತಿದ್ದು, ಈ ಸಂಬಂಧ ಸರ್ಕಾರ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಒತ್ತಾಯ ಪಡಿಸಿದರು.
SUMMARY | Kp Sripal and Parvathish, members of the Naxal Rehabilitation and Surrender Committee, visited the spot in connection with the encounter of Vikram Gowda at Pithubail in Nadpal of Hebri taluk
KEY WORDS |Kp Sripal , Parvathish, members of the Naxal Rehabilitation and Surrender Committee, encounter of Vikram Gowda at Pithubail, Nadpal of Hebri taluk