Tuesday, 15 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • SHIMOGA NEWS LIVE
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
JP STORY

ನಕ್ಸಲ್‌ ನಾಯಕ ವಿಕ್ರಂಗೌಡನ ಎನ್‌ಕೌಂಟರ್‌ನಲ್ಲಿ ಕಣ್ಣಿಗೆ ಕಾಣದ್ದು | JP ಬರೆಯುತ್ತಾರೆ

13
Last updated: November 20, 2024 8:46 pm
13
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 20, 2024

- Advertisement -

ಶಿವಮೊಗ್ಗ | ನಕ್ಸಲ್ ವಿಕ್ರಂ ಗೌಡ ಎನ್ಕೌಂಟರ್ ಸ್ಥಳಕ್ಕೆ ಮಾಧ್ಯಮಗಳಿಗೆ ನಿರ್ಬಂಧ ಹಲವು ಅನುಮಾನದಗಳಿಗೆ ಎಡೆಮಾಡಿಕೊಟ್ಟ ಪ್ರಕರಣ..ಕಾಡುವ ಪ್ರಶ್ವೆಗಳು…ಉತ್ತರಿಸುವರೇ ಪೊಲೀಸರು ಜೆಪಿ ಬರೆಯುತ್ತಾರೆ

ಹದಿನೈದು ವರ್ಷಗಳಿಂದ ತಣ್ಣಗಿದ್ದ ಮಲೆನಾಡಿನಲ್ಲಿ ಮತ್ತೆ ಪೊಲೀಸರ ಗುಂಡಿನ ಸದ್ದು, ಓರ್ವ ನಕ್ಸಲನ ಬಲಿ ಪಡೆದಿದೆ. ಶಿವಮೊಗ್ಗ ಉಡುಪಿ ಮತ್ತು ಚಿಕ್ಕಮಗಳೂರಿನ ಭಾಗಗಳಲ್ಲಿ ನಕ್ಸಲರ ಚಟುವಟಿಕ ಕಡಿಮೆಯಾಗಿತ್ತು. ನಕ್ಸಲರ ಆಕ್ಟಿವಿಟಿ ಏನಿದ್ರೂ, ಕೊಡಗು ಚಾಮರಾಜ ನಗರ ಸೇರಿದಂತೆ ಕೇರಳ ತಮಿಳುನಾಡು ಕರ್ನಾಟಕದ ಟ್ರೈ ಜಂಕ್ಷನ್ ಸ್ಪಾಟ್ ನಲ್ಲಿ ನಡೆಯುತ್ತಿದೆ ಎನ್ನಲಾಗಿತ್ತು. ಆ ಕಾರಣಕ್ಕೆ ಅಲ್ಲಿ ANF ಕ್ಯಾಂಪ್ ಗಳನ್ನ ತೆರೆಯಲಾಗಿತ್ತು. ಈ ನಡುವೆ ಕೇರಳ ಥಂಡರ್‌ ಬೋಲ್ಟ್‌ ತಂಡ ನಕ್ಸಲರಿಗೆ ಹಿನ್ನಡೆಯಾಗುವಂತೆ ಮಾಡಿದ ನಂತರ ಬಿ.ಜಿ ಕೃಷ್ಣ ಮೂರ್ತಿ ಮತ್ತು ಹೊಸಗದ್ದೆ ಪ್ರಭಾ ಬಂಧನಕ್ಕೊಳಗಾದರು. ಇದು ನಕ್ಸಲರ ಅಂತ್ಯಕ್ಕೆ ನಾಂದಿ ಎಂದೇ ಅರ್ಥೈಸಲಾಗಿತ್ತು. 

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಆದರೆ ವಿಕ್ರಂಗೌಡ ಮತ್ತು ಮುಂಡಗಾರು ಲತಾ ಮಲೆನಾಡಿನತ್ತ ಮುಖ ಮಾಡಿದ್ದಾರೆ ಎಂದು ಗೊತ್ತಾಗುತ್ತಿದ್ದಂತೆ ಪೊಲೀಸರು ಅಲರ್ಟ್ ಆದರು. ಸುಬ್ರಹ್ಮಣ್ಯ ಕಾಡಿನ ಪರಿಸರದಲ್ಲಿ ವಿಕ್ರಂಗೌಡ ಹಾಗು ಚಿಕ್ಕಮಗಳೂರಿನ ಪರಿಸರದಲ್ಲಿ ಮುಂಡಗಾರು ಲತಾ ಕಾಣಿಸಿಕೊಂಡಾಗ ಎ.ಎನ್.ಎಫ್ ತಂಡ ಕೂಂಬಿಂಗ್ ಕಾರ್ಯಾಚರಣೆ ಚುರುಕುಗೊಳಿಸಿದೆ. ಅದರ ಫಲವಾಗಿ ಖಚಿತ ಮಾಹಿತಿ ಮೇರೆಗೆ ವಿಕ್ರಂಗೌಡ ಇದ್ದ ಸ್ಥಳ ಸುತ್ತುವರೆದ ANF ಟೀಂ 18-11-24 ರ ಸಂಜೆ ಆರು ಗಂಟೆಗೆ ಹೆಬ್ರಿ ಪೀತ್‌ ಬೈಲ್‌ನಲ್ಲಿರುವ ಮನೆಯ ಸಮೀಪ ಆತನನ್ನ ಎನ್‌ಕೌಂಟರ್‌ ಮಾಡಿದೆ. 

ವಿಷಯ ಅಂದರೆ, ವಿಕ್ರಂಗೌಡ ಸಾವನ್ನಪ್ಪಿ 12 ಗಂಟೆಯಾದರೂ ಈ ವಿಷಯ ಹೊರ ಜಗತ್ತಿಗೆ ಗೊತ್ತಿರಲಿಲ್ಲ. ಮಾರನೆ ದಿನ ಬೆಳಿಗ್ಗೆ ಮಾದ್ಯಮಗಳಿಗೆ ವಿಷಯ ಗೊತ್ತಾಗುತ್ತಿದ್ದಂತೆ ಉಡುಪಿ, ಮಂಗಳೂರು, ಶಿವಮೊಗ್ಗ ಸೇರಿದಂತೆ ನೆರೆಯ ಕೇರಳದ ಮಾಧ್ಯಮಗಳ ಜನಪ್ರತಿನಿಧಿಗಳು ಸ್ಪಯಂ ಪ್ರೇರಿತರಾಗಿ ಸ್ಥಳಕ್ಕೆ ದೌಡಾಯಿಸಿದ್ದಾರೆ.  ಸಂಜೆ ಹೊತ್ತಿಗೆ ನಡೆದ ಎನ್‌ಕೌಂಟರ್‌ ಆದ ಕಾರಣ  ಪೊಲೀಸರ ಮುಂದಿನ ಕಾನೂನಿನ ಪ್ರಕ್ರೀಯೆಗಳಿಗೆ ಕತ್ತಲೆ ಅಡಚಣೆ ಮಾಡಿತ್ತು. 

car decor

ಹಾಗಾಗಿ ಮಾರನೆ ದಿನ ಬೆಳಿಗ್ಗೆ ಎಲ್ಲಾ ಪ್ರಕ್ರೀಯೆಗಳಿಗೆ ಚಾಲನೆ ನೀಡಲಾಯಿತು. ಆಂತರಿಕ ಭದ್ರತಾ ವಿಭಾಗದ ಐಜಿಪಿ ರೂಪ ಮೌದ್ಗಿಲ್ ರವರು ಸ್ಥಳಕ್ಕೆ ಭೇಟಿ ನೀಡಿದರು. ಸುಮಾರು ಒಂದು ಗಂಟೆಗೂ ಹೆಚ್ಚು ತಾಸು ಘಟನೆಯನ್ನು ಅವಲೋಕಿಸಿದರು. ಆ ಬಳಿಕ ವಿಕ್ರಂಗೌಡನ ಎನ್ಕೌಂಟರ್ ಬಗ್ಗೆ ಮಾಹಿತಿ ನೀಡಿದರು.

ಆದರೆ ಮಾಧ್ಯಮಗಳನ್ನು ಎನ್ಕೌಂಟರ್ ನಡೆದ ಸ್ಥಳಕ್ಕೆ ಬಿಡಲಿಲ್ಲ. ಐನೂರು ಮೀಟರ್ ದೂರದಲ್ಲೇ ಮೀಡಿಯಾಗಳಿಗೆ ನಿರ್ಬಂಧ ವಿಧಿಸಲಾಯಿತು. ತುಸು ಮುಂದಕ್ಕೆ ಹೋಗದಂತೆ ಬಿಗಿ ಪಹರೆ ಹಾಕಲಾಗಿತ್ತು. ಘಟನಾ ಸ್ಥಳಕ್ಕೆ ಒಂಬತ್ತು ಕಿಲೋಮೀಟರ್ ನಡೆದು ಬಂದ ಪತ್ರಕರ್ತರಿಗೆ ಅಲ್ಲಿ ನೈಜ ವರದಿಗಾರಿಕೆ ಮಾಡಲು ಸಾಧ್ಯವಾಗಲಿಲ್ಲ. ಈ ಹಿಂದೆ ನಡೆದ ಈದು ಎನ್ಕೌಂಟರ್, ದೇವರಬಾಳು ಎನ್ಕೌಂಟರ್, ಮಾವಿನಹೊಲ ಎನ್ಕೌಂಟರ್ ಮೆಣಸಿನ ಹಾಡ್ಯ ಎನ್ಕೌಂಟರ್ ಘಟನಾ ಸ್ಥಳಗಳಿಗೆ ಪತ್ರಕರ್ತರನ್ನು ಮುಕ್ತವಾಗಿ ಬಿಡಲಾಗಿತ್ತು.  ಆ ಅವಕಾಶ ಎನ್ನೌಂಟರ್ ಹೇಗೆ ನಡೆದಿರಬಹುದು ಎಂಬ ಚಿತ್ರಣ ಕಟ್ಟಿಕೊಡುತ್ತಿತ್ತು. ಆದರೆ ವಿಕ್ರಂ ಗೌಡನ ಎನ್ಕೌಂಟರ್ ಪ್ರಕರಣದಲ್ಲಿ ಪೊಲೀಸರು ಮಾದ್ಯಮಗಳಿಗೆ ಪ್ರವೇಶವನ್ನೇ ನಿರ್ಬಂಧಿಸಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತು. ಪತ್ರಕರ್ತರು ಎಷ್ಟು ಬೇಡಿಕೊಂಡರೂ ಪೊಲೀಸರ ಮನಸ್ಸು ಕರಗಲಿಲ್ಲ. ಹೊಸ BNS ಕಾಯ್ದೆಯ ಕಾರಣಗಳನ್ನು ಮುಂದಿಡಲಾಯಿತು. ಹೊಸ ಬಿ.ಎನ್.ಎಸ್ ಕಾಯ್ದೆ ಯಾವುದೇ ಕ್ರೈಂ ಸೀನ್ ನಡೆದಾಗ ಮಾದ್ಯಮಗಳಿಗೆ ನಿರ್ಬಂಧ ವಿಧಿಸಿ ಅಂತಾ  ಹೇಳಿದೆಯಾ ಎಂಬುದು ಪ್ರಶ್ನೆಯಾಗಿದೆ. ಕಾನೂನು ಪ್ರಕ್ರೀಯೆಗಳು ಮುಗಿದ ನಂತರವಾದ್ರೂ ಎನ್ಕೌಂಟರ್ ಘಟನಾ ಸ್ಥಳಕ್ಕೆ ಪತ್ರಕರ್ತರನ್ನು ಬಿಡಬಹುದಿತ್ತಲ್ಲವೇ…ಇದಕ್ಕೆ ಉಡುಪಿ ಎಸ್ಪಿಯವರೇ ಸ್ಪಷ್ಟನೆ ಕೊಡಬೇಕು. ಇಲ್ಲವಾದಲ್ಲಿ ವಿಕ್ರಂ ಗೌಡನ ಎನ್ಕೌಂಟರ್ ಬಗ್ಗೆ ಅನುಮಾನಗಳು ದಟ್ಟವಾಗಿಯೇ ಉಳಿಯುತ್ತದೆ. ದೇಶದಲ್ಲಿ ನಡೆದ ಎಲ್ಲಾ ಎನ್ಕೌಂಟರ್ ಗಳಲ್ಲಿ ಹಲವು ಫೇಕ್ ಎನ್ಕೌಂಟರ್ ಗಳು ಎಂದು ನೆಲದ ಕಾನೂನು ಸಾಬೀತು ಮಾಡಿದೆ. ವಿಕ್ರಂ ಗೌಡನ ಪ್ರಕರಣ ಹಾಗಾಗಬಾರದಲ್ಲವೆ!

ವಿಕ್ರಂ ಗೌಡನ ಬಳಿ ಅಪಾಯಕಾರಿ ಶಸ್ತ್ರಾಸ್ತ್ರಗಳಿದ್ದವು ಅಂತಾ ಪೊಲೀಸರು ಹೇಳುವ ಕಾಗೆ ಗೂಬೆಯ ಲೆಕ್ಕದಲ್ಲಿ ಸುದ್ದಿ ಮಾಡಿದ್ರೆ ಸತ್ಯ ಸತ್ತು ಹೋಗುತ್ತೆ. ನಕ್ಸಲ್‌ ಪುನರ್ವಸತಿ ಹಾಗು ಶರಣಾಗತಿ ಸಮಿತಿ ಈ ಘಟನೆ ಬಗ್ಗೆ ಮೌನಕ್ಕೆ ಶರಣಾಗಿರುವುದು ಕೂಡ ಅನಮಾನಕ್ಕೆ ಎಡೆಮಾಡಿಕೊಟ್ಟಿದೆ. ವಿಕ್ರಂಗೌಡನ ಶರಣಾಗತಿಗೆ ಕಾನೂನಿನ ಚೌಕಟ್ಟಿನಲ್ಲಿಯೇ ಕೆಲಸಗಳು ನಡೆಯುತ್ತಿರುವಾಗ. ಆತ ಏನಾದ್ರೂ ದೊಡ್ಡ ಅನಾಹುತ ಸೃಷ್ಟಿಸಲು ಮುಂದಾಗಿದ್ದನಾ? ಜನಪ್ರತಿನಿಧಿಗಳನ್ನು ಟಾರ್ಗೆಟ್‌ ಮಾಡಿದ್ದನಾ? ಕೊಲ್ಲಲು ಮುಂದಾಗಿದ್ದನಾ…ಪೊಲೀಸರು ಉತ್ತರಿಸಬೇಕಲ್ಲವೇ..

ನಟೋರಿಯಸ್‌ ರೌಡಿಗಳನ್ನು ಕರೆದುಕೊಂಡು ಹೋಗುವಾಗ ಆತ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ. ನಮ್ಮ ಸಿಬ್ಬಂದಿಗಳು ಆತನನ್ನು ಹಿಡಿಯಲು ಹೋದಾಗ ಆತ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ. ಹೀಗಾಗಿ ಆತ್ಮರಕ್ಷಣೆಗಾಗಿ ರೌಡಿ ಕಾಲಿಗೆ ಗುಂಡಿನ ಮುತ್ತೇಟು ಕೊಟ್ಟಿದ್ದೇವೆ ಎನ್ನುವ ರೆಡಿಮೇಡ್‌ ಡೈಲಾಗ್‌ ನೀಡುವ ಪೊಲೀಸ್‌ ಇಲಾಖೆ ದಾರಿ ತಪ್ಪಿದ ಮಲೆನಾಡಿನ ಯುವಕ ಯುವಕ ಯುವತಿಯರ ಬಗ್ಗೆ ಅದೇ ಔದಾರ್ಯ ತೋರಬಿಕಿತ್ತಲ್ಲವ

20 ಕ್ಕೂ ಹೆಚ್ಚು ಮಲೆನಾಡಿನ ಯುವಕ ಯುವತಿಯರು ಪೊಲೀಸರ ಗುಂಡಿಗೆ ಬಲಿಯಾಗಿದ್ದಾರೆ..ಈ ಯುವಕ ಯುವತಿಯರೆಲ್ಲಾ ಒಂದು ಕಾಲದಲ್ಲಿ ಶಿವಮೊಗ್ಗದ ನಗರದಲ್ಲ ಕಟೌಟ್ ಗಳನ್ನ ಹಿಡಿದು ಸಾಮಾಜಿಕ ಹೋರಾಟ ಮಾಡಿದವರು. ನೊಂದವರಿಗೆ ನ್ಯಾಯಕೊಟ್ಟವರೇ ಆಗಿದ್ದಾರೆ. ಆದರೆ ಪಟ್ಟಭದ್ರಾ ಹಿತಾಸಕ್ತಿಗಳಿಗೆ ಬಲಿಯಾದ ಇವರುಗಳು ನಕ್ಸಲರಾಗುತ್ತಾರೆ ಅಂತಾ ಶಿವಮೊಗ್ಗದ ಜನತೆ ಭಾವಿಸಿರಲಿಲ್ಲ .ಹಾದಿ ತಪ್ಪಿದ ಮಕ್ಕಳನ್ನ ಸರಿದಾರಿಗೆ ತರಲು ಸರ್ಕಾರ ನಕ್ಸಲ್ ಪ್ಯಾಕೇಜ್‌ ಘೋಷಣೆ ಮಾಡಿದರೂ ಸಹ ಎನ್ಕೌಂಟರ್ ಹೆಸರಿನಲ್ಲಿ ಮಲೆನಾಡಿನ ಯುವಕ ಯುವತಿಯರನ್ನು ಪೊಲೀಸರು ಬಲಿ ಪಡೆಯುತ್ತಿರುವುದು ಎಷ್ಟು ಸರಿ? ಪೊಲೀಸ್ ಇಸ್ ನಾಟ್ ಎನ್ಕೌಂಟರ್..ಹೀ ಹಿಸ್ ಎ ಪ್ರೊಟೆಕ್ಟರ್ ಎನ್ನುವ ರಜನಿಕಾಂತ್ ನಟನೆಯ ವೆಟ್ಟೈಯನ್ ಸಿನಿಮಾ ಎನ್ಕೌಂಟರ್ ಗಳ ಅಸಲಿಯತ್ತನ್ನ ಬಿಚ್ಚಿಟ್ಟಿದೆ. ಸಾಧ್ಯವಾದರೆ ಪೊಲೀಸರು ಸಮಯ ಮಾಡಿಕೊಂಡು ನೋಡಿ.

SUMMARY | JP writes about the suspicions lurking in Vikram Gowda’s encounter

KEY WORDS | JP writes , suspicions lurking in Vikram Gowda encounter

malenadutoday add
Share This Article
Facebook Whatsapp Whatsapp Telegram Threads Copy Link
Previous Article ನಮ್ಮ ಸಹ್ಯಾದ್ರಿ ನಮ್ಮ ಹೆಮ್ಮೆ 
Next Article ಶಿವಮೊಗ್ಗ ಡಿಸಿ ಆಫೀಸ್‌ ಎದುರು ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೂ ಪ್ರತಿಭಟನೆಗೆ ಮುಂದಾದ ಬಿಜೆಪಿ ! ಕಾರಣ?
Leave a Comment

Leave a Reply Cancel reply

Your email address will not be published. Required fields are marked *

You Might Also Like

JP STORY

ಸಹ್ಯಾದ್ರಿ ಕಾಲೇಜು ಸ್ಟೇಡಿಯಂನಲ್ಲಿ ಕಾರ್‌ ರೇಸ್‌ಗೆ ಆಕ್ರೋಶ | ವಿರೋಧದ ಬೆನ್ನಲ್ಲೆ ಅವಕಾಶ ಕ್ಯಾನ್ಸಲ್‌

By 13

BIG NEWS KARNATAKA | ನಕ್ಸಲ್‌ ಮುಖಂಡ ವಿಕ್ರಂಗೌಡ ಎನ್‌ಕೌಂಟರ್‌ | ದಶಕಗಳ ನಂತರ ಕಾಡಿನಲ್ಲಿ ಗುಂಡಿನ ಸದ್ದು

By 13

BIGNEWS | ನಾಲ್ಕು ಜಿಲ್ಲೆಗಳ ಕಾಡಲ್ಲಿ ಮತ್ತೆ ಜೋರಾಯ್ತು ಕೂಂಬಿಂಗ್‌ | ಶರಣಾಗುತ್ತಾರಾ ನಕ್ಸಲ್‌!

By 13

BREKING | ಪುರದಾಳ್ ಸುತ್ತಮುತ್ತ ಉಪಟಳ ನೀಡುತ್ತಿದ್ದ ಕಾಡಾನೆ ಸಾವು?

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up