SHIVAMOGGA | MALENADUTODAY NEWS | ಮಲೆನಾಡು ಟುಡೆ Nov 18, 2024
ಪ್ರೀತಿಸಿದ ಯುವತಿ ಇದ್ದಕ್ಕಿದ್ದ ಹಾಗೆ ಪ್ರೇಮ ನಿರಾಕರಿಸಿದ್ದಕ್ಕೆ ಯುವಕನೊಬ್ಬ ಆಕೆಗೆ ಕಿರುಕುಳ ನೀಡಿ ಅಶ್ಲೀಲ ಫೋಟೋ ಬಯಲು ಆಡಿದ ಆರೋಪದ ಅಡಿಯಲ್ಲಿ ಯುವಕನೊಬ್ಬನ ವಿರುದ್ಧ ತೀರ್ಥಹಳ್ಳಿಯ ಠಾಣೆ ಒಂದರಲ್ಲಿ ಕೇಸ್ ದಾಖಲಾಗಿದೆ. ಬೆಂಗಳೂರು ರಾಮನಗರ ಮೂಲದ ಯುವಕನ ವಿರುದ್ಧ ಈ ಕೇಸ್ ದಾಖಲಾಗಿದೆ. ಆತನ ವಿರುದ್ದ ಅವಾಚ್ಯ ಶಬ್ದಗಳ ನಿಂದನೆ, ಖಾಸಗಿ ಫೋಟೋಗಳನ್ನ ಸೋಶಿಯಲ್ ಮೀಡಿಯಾಕ್ಕೆ ಹಾಕಿದ ಆರೋಪ, ಜೀವ ಬೆದರಿಕೆ ಹಾಕಿದ ದೂರನ್ನ ಸಲ್ಲಿಸಿದ್ದು ಎಫ್‌ಐಆರ್ ದಾಖಲಾಗಿದೆ.
ಬೆಳಗಾವಿ ರಿಯಾಜ್ ಅರೆಸ್ಟ್
ಫೈನಾನ್ಸ್ ನಲ್ಲಿ ಸೀಜ್ ಆದ ಜೆಸಿಬಿಯ ಫೋಟೋವನ್ನ ಸೋಶಿಯಲ್ ಮೀಡಿಯಾದಲ್ಲಿ ಹಾಕಿ ಅದು ಮಾರಾಟಕ್ಕೆ ಇದೆ ಎಂದು ನಂಬಿಸಿ ಮೋಸ ಮಾಡಿದ ಬೆಳಗಾವಿ ಬೈಲಹೊಂಗಲ ನಿವಾಸಿ ರಿಯಾಜ್ ಎಂಬವರನ್ನ ತುಂಗಾನಗರ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈತ ಶಿವಮೊಗ್ಗದ ವ್ಯಕ್ತಿಯೊಬ್ಬರಿಂದ ಹಣ ಪಡೆದು ವಂಚಿಸಿರುವ ಸಂಬಂಧ ಎಫ್‌ಐಆರ್ ದಾಖಲಾಗಿತ್ತು.
ರಸ್ತೆಯಲ್ಲಿ ಹೊತ್ತಿ ಉರಿದ ಒಮಿನಿ
ಮಂಗಳೂರಿನಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಒಮಿನಿಯೊಂದು ನಡುರಸ್ತೆಯಲ್ಲಿ ಹೊತ್ತಿ ಉರಿದ ಘಟನೆ ಶಿವಮೊಗ್ಗದ ಹೊನ್ನಾಪುರ ದಲ್ಲಿ ನಡೆದಿದೆ. ರಸ್ತೆ ಮಧ್ಯೆ ಪೆಟ್ರೋಲ್ ಖಾಲಿಯಾಗಿ ವಾಹನ ನಿಂತಿದ್ದು, ಅದಕ್ಕೆ ಪೆಟ್ರೋಲ್ ಹಾಕುತ್ತಿದ್ದ ವೇಳೆ ಒಮಿನಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಆ ಬಳಿಕ ವಾಹನ ಸಂಪೂರ್ಣ ಸುಟ್ಟು ಹೋಗಿದೆ. ಇನ್ನು ಅದೃಷ್ಟಕ್ಕೆ ಘಟನೆಯಲ್ಲಿ ಯಾರಿಗೂ ಏನೂ ಆಗಿಲ್ಲ

SUMMARY | shivamogga fast news
KEY WORDS | shivamogga fast news