ತಂದೆ ಮಗನ ಬಾಂಧವ್ಯದ ಫಾದರ್‌ ಚಿತ್ರದ ಮೋಷನ್‌ ಪೋಸ್ಟರ್‌ ರಿಲೀಸ್‌

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Dec 13, 2024

ಡಾರ್ಲಿಂಗ್‌ ಕೃಷ್ಣ ಅಭಿನಯದ ಹಾಗೂ ರಾಜ್‌ ಮೋಹನ್‌ ನಿರ್ದೇಶನದ ಫಾದರ್‌ ಚಿತ್ರದ ಮೋಷನ್ ಪೋಸ್ಟರ್‌ ನಿನ್ನೆ ಆನಂದ್‌ ಆಡಿಯೋ ಯೂಟ್ಯೂಬ್‌ ಚಾನೆಲ್‌ ನಲ್ಲಿ ಬಿಡುಗಡೆಯಾಗಿದೆ.

- Advertisement -

ಈ ಹಿಂದೆ ಚಿತ್ರದ ಶೀರ್ಷಿಕೆ ಅನಾವರಣ ಕಾರ್ಯಕ್ರಮವನ್ನು ಚಿತ್ರತಂಡ ಅದ್ದೂರಿಯಾಗಿ ನೆರವೇರಿಸಿತ್ತು, ಅದಾದ ಬಳಿಕ ಬಹಳಸಮಯದ ನಂತರ ಚಿತ್ರತಂಡ ಚಿತ್ರದ ಮೋಷನ್‌ ಪೋಸ್ಟರ್‌ನ್ನ ಬಿಡುಗಡೆ ಮಾಡಿದೆ. ಈ  ಚಿತ್ರವನ್ನು ಕಬ್ಜಾ ಖ್ಯಾತಿಯ ಆರ್‌ ಚಂದ್ರು ನಿರ್ಮಾಣ ಮಾಡುತ್ತಿದ್ದಾರೆ. ಹಾಗೆಯೇ ಈ ಚಿತ್ರಕ್ಕೆ ನಕುಲ್‌ ಅಭ್ಯಂಕರ್‌ ಸಂಗೀತ ಸಂಯೋಜಿಸಿದ್ದಾರೆ. ಈಗ ಬಿಡುಗಡೆಯಾಗಿರುವ ಫಾದರ್‌ ಚಿತ್ರದ ಮೋಷನ್‌ ಪೋಷ್ಟರ್‌ ನೋಡಿದಾಗ ಈ ಸಿನಿಮಾ ಹೆಸರಿಗೆ ತಕ್ಕಹಾಗೆ ತಂದೆ ಹಾಗೂ ಮಗನ ಬಾಂಧವ್ಯದಿಂದ ಮೂಡಿಬಂದಿರುವ ಚಿತ್ರ ಎಂದು ಹೇಳಬಹುದು  ಹಾಗೆಯೇ ಚಿತ್ರದಲ್ಲಿ ಡಾರ್ಲಿಂಗ್‌ ಕೃಷ್ಣರ ತಂದೆಯ ಪಾತ್ರದಲ್ಲಿ ಪ್ರಕಾಶ್‌ ರಾಜ್‌ ನಟಿಸುತ್ತಿದ್ದು, ಡಾರ್ಲಿಂಗ್‌ ಕೃಷ್ಣಗೆ  ನಾಯಕಿಯಾಗಿ ಅಮೃತ ಅಯ್ಯಂಗರ್‌ ಅಭಿನಯಿಸಲಿದ್ದಾರೆ.

 

SUMMARY | The motion poster of Darling Krishna starrer Father directed by Rajmohan was released yesterday on Anand Audio’s YouTube channel.

KEYWORDS |  Father, Darling Krishna,  Anand Audio, filmy news, 

Share This Article