SHIVAMOGGA | MALENADUTODAY NEWS | ಮಲೆನಾಡು ಟುಡೆ | Mar 24, 2025
ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಚಿತ್ರ 2026 ಮಾರ್ಚ್ 19 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.
ಈ ಕುರಿತು ಯಶ್ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅಂದು ಕೊಂಡಂತೆ ಚಿತ್ರೀಕರಣ ಮುಗಿದಿದ್ದರೆ 2025 ರ ಏಪ್ರಿಲ್ 10 ರಂದು ಚಿತ್ರ ರಿಲೀಸ್ ಆಗಬೇಕಿತ್ತು. ಆದರೆ ಚಿತ್ರದ ಚಿತ್ರೀಕರಣ ಹಾಗೂ ಪ್ರೊಡಕ್ಷನ್ ಕೆಲಸಗಳು ಬಾಕಿ ಇದ್ದಿದ್ದರಿಂದ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಿತ್ತು. ಇದೀಗ ಚಿತ್ರದ ಅಧಿಕೃತ ರಿಲೀಸ್ ಡೆಟ್ ಘೋಷಣೆ ಆಗಿದ್ದು, ಇದು ರಾಕಿಂಗ್ ಸ್ಟಾರ್ ಯಶ್ ರವರ ಅಭಿಮಾನಿಗಳಿಗೆ ಸಂತೋಷ ತಂದಿದೆ.
ಈಗ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದ್ದು ಕನ್ನಡ ಹಾಗೂ ಇಂಗ್ಲಿಷ್ನಲ್ಲಿ ಒಟ್ಟಿಗೆ ಚಿತ್ರದ ಶೂಟಿಂಗ್ ನಡೆಯುತ್ತದೆ ಎನ್ನಲಾಗಿದೆ. ಸರಿಸುಮಾರು 300 ರಿಂದ 350 ಕೋಟಿ ವೆಚ್ಚದಲ್ಲಿ ರಿಲೀಸ್ ಆಗುತ್ತಿರುವ ಈ ಚಿತ್ರಕ್ಕೆ ಕೆವಿಎನ್ ಪ್ರೊಡಕ್ಷನ್ ಸಂಸ್ಥೆ ಹಾಗೂ ಯಶ್ರವರು ಬಂಡವಾಳವನ್ನು ಹೂಡಿದ್ದಾರೆ.
ಈ ಸಿನಿಮಾದ ನಾಯಕಿಯಾಗಿ ಕಿಯಾರ ಅಡ್ವಾನಿ ಅಭಿನಯಿಸುತ್ತಿದ್ದು, ನಯನತಾರ, ಹುಮಾ ಖುರೇಶಿ ,ತಾರಾ ಸುತಾರಿಯಾ ಸೇರಿದಂತೆ ದೊಡ್ಡ ದೊಡ್ಡ ನಟ ನಟಿಯರ ದಂಡೇ ಈ ಚಿತ್ರದಲ್ಲಿದೆ.
SUMMARY | Rocking Star Yash starrer Toxic is all set to release worldwide on March 19, 2026.
KEYWORDS | Rocking Star Yash, Toxic, release,