ಚಿಕ್ಕಮಗಳೂರು |ಬ್ರೇಕ್‌ ಫೇಲ್‌ನಿಂದ ಡಾಂಬರ್‌ ಮಷಿನ್‌ ಲಾರಿ ಪಲ್ಟಿ | ಘಾಟಿಯಲ್ಲಿ ಲಾರಿ ಕಾರು ಡಿಕ್ಕಿ

13

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 28, 2025 ‌‌ 

ಚಿಕ್ಕಮಗಳೂರು ಚಾರ್ಮಾಡಿ ಘಾಟಿಯಲ್ಲಿ ಅಪಘಾತವಾಗಿದ್ದು ಮೂವರು ಗಾಯಗೊಂಡಿರುವ ಘಟನೆ ನಡೆದಿದೆ. ಕಾರು ಹಾಗೂ ಲಾರಿ ಮಧ್ಯೆ ಆಕ್ಸಿಡೆಂಟ್‌ ಆಗಿದ್ದು ಘಾಟಿ ಮೂರನೇ ತಿರುವಿನಲ್ಲಿ ಘಟನೆ ಸಂಭವಿಸಿದೆ. ಮೂಡಿಗೆರೆಯಿಂದ ಉಜಿರೆಗೆ ತೆರಳುತ್ತಿದ್ದ ಕಾರು ಕೊಟ್ಟಿಗೆಹಾರಕ್ಕೆ ಹೋಗುತ್ತಿದ್ದ ಲಾರಿ ಮಧ್ಯೆ ಡಿಕ್ಕಿಯಾಗಿದೆ. ಘಟೆಯಲ್ಲಿ ಕಾರು ಜಖಂಗೊಂಡಿದೆ. 

 

ಇನ್ನೊಂದೆಡೆ ಮೂಡಿಗೆರೆಯಲ್ಲಿ ಡಾಂಬರ್‌ ಮಷಿನ್‌ ಸಾಗಿಸ್ತಿದ್ದ ಲಾರಿ ಬ್ರೇಕ್‌ ಫೇಲ್‌ ಆಗಿ ಪಲ್ಟಿಯಾಗಿದೆ. ಬಿದರಹಳ್ಳಿ ಬಳಿ ಘಟನೆ ನಡೆದಿದ್ದು, ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಲಿಂಗದಹಳ್ಳಿ ರಸ್ತೆಯಲ್ಲಿ ಡಾಂಬರಿಂಗ್‌ ಕೆಲಸ ಮುಗಿಸಿ ಮಷಿನ್‌ ತೆಗೆದುಕೊಂಡು ಹೋಗುತ್ತಿದ್ದಾಗ ಲಾರಿ ಪಲ್ಟಿಯಾಗಿದೆ.

SUMMARY | Chikkamagaluru, Charmadi Ghati, Mudigere, Lingadahalli, Ujire

KEY WORDS | Chikkamagaluru, Charmadi Ghati, Mudigere, Lingadahalli, Ujire

Share This Article