SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 7, 2024
ದೇಶದ ಅತಿದೊಡ್ಡ ಕಾರು ಉತ್ಪಾದಕ ಕಂಪನಿಯಲ್ಲೊಂದಾದ ಮಾರುತಿ ಸುಜುಕಿ ಕಾರುಗಳು ಬೆಲೆಯನ್ನು ಹೆಚ್ಚಿಸುವ ಮೂಲಕ ಗ್ರಾಹಕರಿಗೆ ಬಿಗ್ ಶಾಕ್ ಅನ್ನು ನೀಡಿದೆ.
ಮಾರುತಿ ಸುಜುಕಿ ಕಾರು ಕಂಪನಿಯ ಉತ್ಪಾದನಾ ವೆಚ್ಚ ಹೆಚ್ಚಾಗಿರುವ ಕಾರಣ ಕಾರುಗಳ ಬೆಲೆಯನ್ನು ಶೇ 4 ರಷ್ಟು ಹೆಚ್ಚು ಮಾಡಲು ನಿರ್ಧರಿಸಿದೆ . ಈ ಬೆಲೆಗಳು ಜನವರಿ 2025 ರಿಂದ ಜಾರಿಯಾಗಲಿದೆ.

ಮಾರುತಿ ಕಾರುಗಳು ಅತಿ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದ್ದವು, ಹಾಗೆಯೇ ಅತಿ ಹೆಚ್ಚು ಮೈಲೇಜ್, ಮೈಂಟೆನೆನ್ಸ್ ವೆಚ್ಚ ಬಹಳಾ ಕಡಿಮೆ, ಹಾಗೂ 5 ಸ್ಟಾರ್ ರೇಟಿಂಗ್ ಹೊಂದಿರುವ ಮಾರುತಿ ಕಾರುಗಳನ್ನು ಬಡವರ ಪಾಲಿನ ಬಾದಾಮಿ ಎನ್ನಲಾಗಿತ್ತು. ಆದರೆ ಕಚ್ಚಾವಸ್ತುಗಳ ಆಮದು ಸುಂಕ, ಉತ್ಪನ್ನಗಳ ಬೆಲೆ ಏರಿಕೆ, ಹಾಗೂ ಪೂರೈಕೆ ಸೇರಿದಂತೆ ಕಾರುಗಳ ಉತ್ಪಾದನಾ ಬೆಲೆ ಏರಿಕೆಯಾಗಿದೆ. ಆದ್ದರಿಂದ ಮಾರುತಿ ಕಾರುಗಳು ಮೇಲೆ ಜನವರಿ 2025ರಿಂದ ಶೇ 4 ರಷ್ಟು ಬೆಲೆ ಹೆಚ್ಚಿಸುವಂತೆ ಘೋಷಿಸಿವೆ. ಉದಾಹರಣೆಗೆ ಪ್ರಸ್ತುತ ಕಾರಿನ ಬೆಲೆ ಈಗ 10 ಲಕ್ಷ ರೂಪಾಯಿಗಳಿದ್ದರೆ ಜನವರಿ 2025 ರಂದು ಆ ಕಾರಿಗೆ ನಾವು 10 ಲಕ್ಷದ ನಲವತ್ತು ಸಾವಿರ ಹೆಚ್ಚು ನೀಡಿ ಕೊಂಡು ಕೊಳ್ಳ ಬೇಕಾಗುತ್ತದೆ.ಈ ಹಿಂದೆ ಹುಂಡೈ ಮೋಟರ್ಸ್ ಸಹ ಬೆಲೆ ಏರಿಕೆ ಘೋಷಿಸಿದ್ದು, ಜನವರಿ 2025 ರಿಂದ ಹುಂಡೈ ಕಾರುಗಳ ಬೆಲೆ 25000 ರೂಪಾಯಿ ಹೆಚ್ಚಾಗಲಿದೆ.
SUMMARY | Maruti Suzuki, one of the largest car manufacturers in the country, has given a big shock to customers by increasing the prices of cars.
KEYWORDS | Maruti Suzuki, increasing the prices, cars, kannadanews,