ಗ್ರಾಮಪಂಚಾಯಿತಿ ಸದಸ್ಯನ ಮೇಲೆ ಹಲ್ಲೆ | ಇಷ್ಟಕ್ಕೂ ಹೊಸನಗರದಲ್ಲಿ ಇದೇನಾಯ್ತು?

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Dec 16, 2024

ಹೊಸನಗರ | ವ್ಯಕ್ತಿಯೋರ್ವ ಗ್ರಾಮಪಂಚಾಯಿತಿ ಸದಸ್ಯನ ಬೈಕ್‌ ಅಡ್ಡಗಟ್ಟಿ ಏಕಾಏಕಿ ಹಲ್ಲೆ ನಡೆಸಿರುವ ಘಟನೆ ಹೊಸನಗರ ತಾಲ್ಲೂಕಿನ ನಿಟ್ಟೂರು ಗ್ರಾಮದಲ್ಲಿ ಭಾನುವಾರ ನಡೆದಿದೆ. ಈ ಘಟನೆಯ ದೃಶ್ಯಾವಳಿಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಆರೋಪಿಯ ವಿರುದ್ಧ  ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ.

- Advertisement -

ಏನಿದು ಘಟನೆ 

ದೇವರಾಜ್‌ ಎಂಬುವವರು ನಿಟ್ಟೂರು ಗ್ರಾಮ ಪಂಚಾಯಿತಿಯ ನಾಗೋಡಿ ವಿಶ್ವನಾಥ್ ಎಂಬುವವರ ಬೈಕ್‌ನ್ನು ಅಡ್ಡಗಟ್ಟಿ ಏಕಾಏಕಿ ಹಲ್ಲೆ ನಡೆಸಿದ್ದಾರೆ. ಗ್ರಾಮ ಪಂಚಾಯಿತಿ ಸದಸ್ಯ ನಾಗೋಡಿ ವಿಶ್ವನಾಥ್‌ರವರ ವಿರುದ್ಧದ ಹಳೇ ದ್ವೇಷವೇ ಈ ಹಲ್ಲೆಗೆ ಕಾರಣ ಎಂದು ದೂರಲಾಗಿದೆ. ಹಲ್ಲೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ರೆಕಾರ್ಡ್‌ ಆಗಿದ್ದು, ಈ ಸಂಬಂಧ ನಾಗೋಡಿ ವಿಶ್ವನಾಥ್  ಪೊಲೀಸರಿಗೆ ದೂರು ನೀಡಿದ್ದಾರೆ.  

SUMMARY | A man intercepted the bike of a gram panchayat member and attacked him at Nittur village in Hosanagara taluk on Sunday.

 

KEYWORDS | gram panchayat member,  attacked,  Hosanagara, crime, news,

Share This Article