SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 31, 2024
ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮೀ ಯೋಜನೆ ಸಹ ಒಂದು. ಈ ಯೋಜನೆಯನ್ನು ರಾಜ್ಯದ ಅನೇಕ ಮಹಿಳೆಯರು ಸಮರ್ಪಕವಾಗಿ ಬಳಸಿಕೊಳ್ಳುತ್ತಿದ್ದು, ಈ ಯೋಜನೆ ಎಷ್ಟೋ ಕುಟುಂಬವನ್ನು ಆರ್ಥಿಕವಾಗಿ ಸದೃಡಗೊಳಿಸುತ್ತಿದೆ. ಇದರಲ್ಲಿ ಬಂದಿರುವ ಹಣವನ್ನು ರಾಜ್ಯದ ಎಷ್ಟೋಜನ ಮಹಿಳೆಯರು ವ್ಯವಹಾರದಲ್ಲಿ ಹೂಡಿಕೆ ಮಾಡಿ ಲಾಭಗಳಿಸುತ್ತಿದ್ದಾರೆ. ಅದಕ್ಕೆ ನಿದರ್ಶನ ಎಂಬಂತೆ ಭದ್ರಾವತಿ ತಾಲ್ಲೂಕಿನ ತಳ್ಳಿಕಟ್ಟೆ ಗ್ರಾಮದ ಅನಿತಾ ಗೃಹಲಕ್ಷ್ಮೀ ಯೋಜನೆಯಿಂದ ಬಂದ 18 ಸಾವಿರ ಹಣವ ಕೂಡಿಟ್ಟು ಹಣದಿಂದ ಹಸು ಖರೀದಿಸಿ ಹೈನುಗಾರಿಗೆ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲದೆ ಪ್ರತಿ ತಿಂಗಳು ಜಮೆಯಾಗುವ ಗೃಹಲಕ್ಷ್ಮಿ ಹಣದೊಂದಿಗೆ ಮತ್ತಷ್ಟು ಹಣ ಸೇರಿಸಿ ಕಿಡ್ನಿ ಸಮಸ್ಯೆ ಇದ್ದ ಪತಿಗೆ ಆಪರೇಷನ್ ಮಾಡಿಸಿದ್ದಾರೆ.

SUMMARY | Anitha of Thallikatte village in Bhadravathi taluk has collected Rs. 18,000 from the Grihalakshmi scheme and has bought a cow with the money and runs it for dairy farming.

KEYWORDS | Thallikatte, Grihalakshmi scheme, dairy farming,