ಕೋಣಂದೂರಿನಲ್ಲಿ ಹಸು ರಕ್ಷಿಸಲು ಹೋಗಿ ವ್ಯಕ್ತಿ ಸಾವು

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Mar 20, 2025

ಶಿವಮೊಗ್ಗ| ಮಂಗಳವಾರ ಕೋಣಂದೂರು ಸಮೀಪದ ಕಾರಗೋಡ್ಲು ಎಂಬಲ್ಲಿ  ಬಾವಿಗೆ ಬಿದ್ದಿದ್ದ ಹಸುವನ್ನು ಮೇಲೆತ್ತಲು ಇಳಿದಿದ್ದ ವ್ಯಕ್ತಿಯೊಬ್ಬರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.  

- Advertisement -

ಕೇರಳದ ಸತೀಶ್‌ (45)  ಮೃತಪಟ್ಟ ವ್ಯಕ್ತಿ ಎಂದು ತಿಳಿದುಬಂದಿದೆ. ರಾಘು ಎಂಬುವರು ಇತ್ತೀಚೆಗೆ ರಿಂಗ್ ಬಾವಿ ನಿರ್ಮಿಸಿದ್ದರು. ಅದಕ್ಕೆ ಮಂಗಳವಾರ ಹಸುವೊಂದು ಆಕಸ್ಮಿಕವಾಗಿ ಬಿದ್ದಿತ್ತು. ಅದನ್ನು ರಕ್ಷಿಸಲು ಸತೀಶ್ ಬಾವಿಗೆ ಇಳಿದಿದ್ದರು. ಈ ವೇಳೆ ಈ ಸತೀಶ್‌ಗೆ ಉಸಿರುಗಟ್ಟಿ ದುರ್ಘಟನೆ ಸಂಭವಿಸಿದೆ. ಸತೀಶ್ ಮತ್ತು ಹಸುವಿನ ಮೃತದೇಹವನ್ನು ಅಗ್ನಿಶಾಮಕ ಸಿಬ್ಬಂದಿ ಬುಧವಾರ ಬಾವಿಯಿಂದ  ಮೇಲಕ್ಕೆ ತೆಗೆದರು. ನಂತರ ಮೃತದೇಹವನ್ನು ಕೋಣಂದೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ – ಮರಣೋತ್ತರ ಪರೀಕ್ಷೆ ನಡೆಸಿ ಕೇರಳಕ್ಕೆ ಕಳುಹಿಸಿಕೊಡಲಾಗಿದೆ. ಈ ಸಂಬಂಧ ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

SUMMARY | A man died of suffocation while trying to lift a cow that had fallen into a well at Karagodlu near Konandur.

KEYWORDS | Karagodlu, well, Konandur, man died, 

Share This Article
Leave a Comment

Leave a Reply

Your email address will not be published. Required fields are marked *