ಕೆ ಎಸ್‌ ಈ‍ಶ್ವರಪ್ಪ ಉಚ್ಚಾಟನೆಗೆ ಕಾರಣ ಯಾರು? ಬಿಎಸ್‌ವೈ ಹೇಳಿದ್ದೇನು? ಈಶ್ವರಪ್ಪ ಉತ್ತರವೇನು?

13

SHIVAMOGGA | MALENADUTODAY NEWS | Apr 24, 2024    

ಶಿವಮೊಗ್ಗ ಲೋಕಸಭಾ ಚುನಾವಣಾ ಅಖಾಡದಲ್ಲಿ ಪಕ್ಷೇತರಾಗಿ ಕಣಕ್ಕಿಳಿದಿರುವ ಕೆಎಸ್‌ ಈಶ್ವರಪ್ಪ ರವರನ್ನು ಬಿಜೆಪಿಯಿಂದ ಉಚ್ಚಾಟಿಸಲು ಕಾರಣ ಯಾರು ಬಿಎಸ್‌ವೈ ರವರಾ? ಹೌದು ಅವರ ಷಡ್ಯಂತ್ರದಿಂದಲೇ ನನ್ನನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ಕೆಎಸ್‌ ಈಶ್ವರಪ್ಪನವರು ಆರೋಪಿಸಿದ್ದರು. ಅಲ್ಲದೆ ಚುನಾವಣೆ ಮುಗಿದ ಬಳಿಕ ಯಡಿಯೂರಪ್ಪನವರೇ ತಮ್ಮನ್ನ  ಪುನಃ ಬಿಜೆಪಿಗೆ ಕರೆದುಕೊಂಡು ಹೋಗುತ್ತಾರೆ ಎಂದಿದ್ದಾರೆ. malenadu today

 

ಇದರ ಬೆನ್ನಲ್ಲೆ ಈಶ್ವರಪ್ಪನವರ ಉಚ್ಚಾಟನೆಯಲ್ಲಿ ತಮ್ಮ ಪಾತ್ರವಿಲ್ಲ ಎಂದು ಬಿಎಸ್‌ ಯಡಿಯೂರಪ್ಪ ನವರು ಹೇಳಿದ್ದಾರೆ. ಈಶ್ವರಪ್ಪನವರು ಅಪೇಕ್ಷೆ ಪಟ್ಟಹಾಗೆ ಅವರ ಉಚ್ಚಾಟನೆ ಯಾಗಿದೆ. ಕೆ.ಎಸ್.ಈಶ್ವರಪ್ಪ ಅವರನ್ನು ಉಚ್ಚಾಟನೆ ಮಾಡುವ ಮುನ್ನ ಅವರಿಗೆ ಸಾಕಷ್ಟು ಅವಕಾಶ ಸಹ ನೀಡಲಾಗಿದೆ. ಅವರ ವಿರುದ್ಧ ಶಿಸ್ತುಸಮಿತಿ ಕ್ರಮ ಕೈಗೊಂಡಿದೆ. ಇದರಲ್ಲಿ ತಮ್ಮ ಪಾತ್ರವೇನು ಇಲ್ಲ ಎಂದಿದ್ದಾರೆ. 

 

ಇನ್ನೂ ಬಿಎಸ್‌ ಯಡಿಯೂರಪ್ಪನವರ ಹೇಳಿಕೆ ಹೊರಬಿದ್ದ ಬೆನ್ನಲ್ಲೆ ಕೆಎಸ್‌ ಈಶ್ವರಪ್ಪ, ತಮ್ಮ ಉಚ್ಚಾಟನೆಯಲ್ಲಿ ಬಿಎಸ್‌ವೈರವರ ಪಾತ್ರ ಇದೆಯೋ ಇಲ್ಲವೋ ಎಂಬುದನ್ನ ಮತ್ತೊಮ್ಮೆ ಹೇಳುತ್ತೇನೆ ಎಂದಿದ್ದಾರೆ.  

 

Share This Article