SHIVAMOGGA | MALENADUTODAY NEWS | ಮಲೆನಾಡು ಟುಡೆ Dec 18, 2024
ಕಾಲೇಜಿನಲ್ಲಿಯೇ ವಿದ್ಯಾರ್ಥಿನಿಯೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆಯೊಂದು ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗ ನಗರದ ಕಾಲೇಜೊಂದರಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ನಿನ್ನೆ ದಿನ ಮೂರ್ಛೇ ತಪ್ಪಿ ಬಿದ್ದು ಸಾವನ್ನಪ್ಪಿದ್ದಾರೆ.
ನಡೆದ ಘಟನೆ ವಿವರ
ಮೂಲಗಳ ಪ್ರಕಾರ, ಶಿವಮೊಗ್ಗ ನಗರದಲ್ಲಿರುವ ಶಿಕ್ಷಣಸಂಸ್ಥೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ನಿನ್ನೆದಿನ ಕಾಲೇಜಿನಲ್ಲಿ ಇದ್ದಕ್ಕಿದ್ದ ಹಾಗೆ ಅಸ್ವಸ್ಥಗೊಂಡು ಪ್ರಿನ್ಸಿಫಾಲರ ರೂಮ್‌ನ ಬಾಗಿಲಲ್ಲಿಯೇ ಕುಸಿದುಬಿದ್ದಿದ್ದಾರೆ. ಅವರನ್ನ ತಕ್ಷಣವೇ ಅಲ್ಲಿಂದ ಕಾರೊಂದಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಷ್ಟರಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಮೃತರು ಕಾಲೇಜಿನಲ್ಲಿ ದ್ವಿತಿಯ ಪಿಯುಸಿ ಓದುತ್ತಿದ್ದರು. ಅವರ ವೈಯಕ್ತಿಕ ವಿವರಗಳನ್ನ ಇಲ್ಲಿ ನೀಡಲಾಗಿಲ್ಲ. ನಿನ್ನೆ ದಿನ ಮೃತರು ಓದಿದ್ದ ಶಾಲೆಯ ಶಿಕ್ಷಕರು ಕಾಲೇಜಿಗೆ ಬಂದಿದ್ದರು ಎನ್ನಲಾಗಿದೆ. ಅವರನ್ನು ಮಾತನಾಡಿಸಲು ತೆರಳುತ್ತಿದ್ದ ವೇಳೆ ವಿದ್ಯಾರ್ಥಿನಿ ಕುಸಿದು ಬಿದ್ದಿದ್ದಾಳೆ. ಈ ದೃಶ್ಯ ಕಾಲೇಜಿನ ಸಿಸಿ ಕ್ಯಾಮರಾದಲ್ಲಿಯು ಸಹ ಸೆರೆಯಾಗಿದೆ.
SUMMARY | A young woman fainted and collapsed at a college in Shimoga.
KEY WORDS | young woman collapsed , college in Shimoga