ಕಾಫಿ ನಾಡಲ್ಲಿ ಕಾಡಾನೆ ಹಾವಳಿ ರೈತರಲ್ಲಿ ಹೆಚ್ಚಿದ ಆತಂಕ 

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Dec 18, 2024

ಚಿಕ್ಕಮಗಳೂರು | ಕಾಫಿ ನಾಡಿನಲ್ಲಿ ಇತ್ತೀಚೆಗೆ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕೆಆರ್‌ ಪೇಟೆಯ ಗ್ರಾಮಗಳಲ್ಲಿ ಒಂಟಿ ಸಲಗವೊಂದು ಒಡಾಡುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕ ಸೃಷ್ಠಿಸಿದೆ.

- Advertisement -

ಒಂಟಿ ಸಲಗದ ಗಜ ಗಾಂಭೀರ್ಯದಿಂದ ರಾತ್ರಿ ಗ್ರಾಮದ ರಸ್ತೆಯಲ್ಲಿ ಒಡಾಡುತ್ತಿರುವ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು. ಕಾಡಾನೆ ಓಡಾಟ  ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಇತ್ತೀಚೆಗೆ  ಹಾಸನದಿಂದ ನಿರಂತರವಾಗಿ ಚಿಕ್ಕಮಗಳೂರು ಜಿಲ್ಲೆಯ ಕೆಲ ಗ್ರಾಮಗಳಿಗೆ ಕಾಡಾನೆಗಳು ಬಂದು ರೈತರ ಬೆಳೆಯನ್ನು ಹಾಳುಮಾಡುತ್ತಿದ್ದು, ರೈತರಿಗೆ ಇದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ಹಿನ್ನಲೆ ಕಾಡಾನೆಯನ್ನು ಕೂಡಲೇ ಸ್ಥಳಾಂತರಗೊಳಿಸುವಂತೆ ಸ್ಥಳೀಯರು  ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಆಗ್ರಹಿಸಿದ್ದಾರೆ.



SUMMARY |  The menace of wild elephants has increased in the coffee country recently. A lone tusker was found roaming in the villages of K.R. Pet in Chikkamagaluru district, creating panic among the villagers.


KEYWORDS |   elephants,  K.R. Pete, Chikkamagaluru, 

Share This Article