SHIVAMOGGA | MALENADUTODAY NEWS | Aug 13, 2024 ಮಲೆನಾಡು ಟುಡೆ
ಶಿವಮೊಗ್ಗ ಎನ್‌ಎಸ್‌ಯುಐ ವಿದ್ಯಾರ್ಥಿ ಸಂಘಟನೆಯಲ್ಲಿ ಕಾರ್ಯಕರ್ತನಾಗಿ ದುಡಿದಿದ್ದ ಹುಡುಗನೊಬ್ಬ ಇದೀಗ ಶಿವಮೊಗ್ಗ ಜಿಲ್ಲಾ ಒಕ್ಕಲಿಗ ಜಿಲ್ಲಾ ಸಂಘದ ನಿರ್ದೇಶಕನಾಗಿ ಆಯ್ಕೆಯಾಗಿದ್ದಾನೆ. ಎನ್‌ಎಸ್‌ಯುಐ ಚೇತು ಎಂದೇ ಗುರುತಿಸಿಕೊಂಡಿದ್ದ ಚೇತನ್ ಕೆ ಇದೀಗ ಒಕ್ಕಲಿಗ ಸಂಘದ ನಿರ್ದೇಶಕರ ಚುನಾವಣೆ 1260 ಮತಗಳನ್ನ ಪಡೆದು ಗೆಲುವು ಸಾಧಿಸಿದ್ದಾರೆ.
ಒಕ್ಕಲಿಗರ ಸಂಘಕ್ಕೆ ಎಂಟ್ರಿ ಪಡೆದ NSUI ಚೇತು
NSUI ನಲ್ಲಿ ಜಿಲ್ಲಾಧ್ಯಕ್ಷರಾಗಿದ್ದ ಚೇತನ್ ಆ ಬಳಿಕ ರಾಜ್ಯಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ. ತದನಂತರ ಯೂತ್ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಚೇತನ್ ಎರಡು ಸಲ ಶಿವಮೊಗ್ಗ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಿ ಕೆಲವೇ ಮತಗಳ ಅಂತರದಲ್ಲಿ ಸೋಲನ್ನಪ್ಪಿದ್ದರು. ಇದೀಗ ಒಕ್ಕಲಿಗ ಸಂಘದ ನಿರ್ದೇಶಕರ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಇವರು ಕಳೆದ ಆವೃತ್ತಿಯಲ್ಲಿ ಒಕ್ಕಲಿಗ ಸಂಘದಲ್ಲಿ ನಿರ್ದೇಶಕರಾಗಿ ನಾಮನಿರ್ದೇಶನಗೊಂಡಿದ್ದರು. ಇದೀಗ ಚುನಾವಣೆಯಲ್ಲಿ ಸ್ಪರ್ಧಿಸಿ ಎರಡನೇ ಆವೃತ್ತಿಗೆ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ರಮೇಶ್ ಹೆಗ್ಡೆಯವರಿಗೆ ದಿಗ್ವಿಜಯ
ಇನ್ನೂ ಜಿಲ್ಲಾ ಒಕ್ಕಲಿಗ ಸಂಘದಲ್ಲಿ 21 ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ನುರಿತ ರಾಜಕಾರಣಿ ಹಾಗೂ ಹೋರಾಟಗಾರರು ಆಗಿರುವ ರಮೇಶ್ ಹೆಗ್ಡೆ ಬಿಎ ರವರು 2001 ಮತಗಳನ್ನ ಪಡೆದ ಮೊದಲ ಸ್ಥಾನದಲ್ಲಿದ್ದಾರೆ. ಉಳಿದಂತೆ ರವಿಕುಮಾರ್ ಕೆಎಸ್, ಕಡಿದಾಳ್ ಗೋಪಾಲ್, ಸುದರ್ಶನ್, ಮೋಹನ್ , ಪುಟ್ಟಸ್ವಾಮಿ ಪ್ರತಿಮಾ, ಸುಂದರೇಶ್ , ಅನ್ನಪೂರ್ಣ ರವರು ಆಯ್ಕೆಯಾಗಿದ್ದಾರೆ
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ
ಯಾರಿಗೆ ಎಷ್ಟು ಮತ
ರವಿಕುಮಾರ್ 1856 ಮತ, ಡಾ. ಕಡಿದಾಳ್ ಗೋಪಾಲ್ 1805, ಆಶಿತ್ ಬಳಗಟ್ಟೆ 1630, ಬಂಡೆ ವೆಂಕಟೇಶ್ 1527, ಸುದರ್ಶನ್ ತಾಯಿಮನೆ 1461, ಎಂ.ಎ.ರಮೇಶ ಹೆಗ್ಡೆ 1442, ಉಂಬಳೇಬೈಲು ಮೋಹನ್ 1436, ಪುಟ್ಟಸ್ವಾಮಿ 1417, ಆದಿಮೂರ್ತಿ 1410, ಪ್ರತಿಮಾ ಡಾಕಪ್ಪ 1367, ರಮೇಶ್ ಬಿ ನಾಯಕ್ 1366, ನೀರುಳ್ಳಿ ನಾಗರಾಜ್ 1342, ಸುಂದರೇಶ್ 1301, ಸುಮಿತ್ರ ಕೇಶವಮೂರ್ತಿ 1298, ಭಾರತಿ ರಾಮಕೃಷ್ಣ 1262, ಚೇತನ್ 1260, ಅನ್ನಪೂರ್ಣ 1259, ಸಹನಾ 1055, ವನಮಾಲ 1031 ಮತ ಪಡೆದಿದ್ದಾರೆ.

ಒಟ್ಟಾರೆ, 21 ನಿರ್ದೇಶಕರ ಸ್ಥಾನಕ್ಕೆ 29 ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. 4137 ಮತದಾರರ ಪೈಕಿ ಭಾನುವಾರು ನಡೆದ ಮತದಾನದಲ್ಲಿ 2599 ಮತದಾರರು ಹಕ್ಕು ಚಲಾಯಿಸಿದ್ದರು.
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ