ಏಕಾಏಕಿ ಕುಸಿದು ಬಿದ್ದ ರಸ್ತೆ ಬೈಕ್‌ ಸವಾರ ಸಾವು | ವಿಡಿಯೋ ವೈರಲ್‌

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Mar 28, 2025

ಪ್ರಪಂಚದಲ್ಲಿ ಪ್ರತಿನಿತ್ಯ ಒಂದಲ್ಲಾ ಒಂದು ರೀತಿಯ ಅನಿರೀಕ್ಷಿತ ಘಟನೆಗಳು ನಡೆಯುತ್ತಲೇ ಇರುತ್ತವೆ. ಅಂತಹ ಘಟನೆಗಳು ಮನುಷ್ಯರಿಗೆ ಅನೀರೀಕ್ಷಿತ ಸಾವನ್ನು ತಂದುಕೊಡುವ ಸಾಧ್ಯತೆ ಸಹ ಹೆಚ್ಚಿರುತ್ತದೆ. ಅದಕ್ಕೆ ನಿದರ್ಶನವೆಂಬಂತೆ ಇಲ್ಲಿಯೂ ಸಹ ಅಂತಹುದ್ದೇ ಒಂದು ಘಟನೆ ನಡೆದಿದೆ. ಅದೇನೆಂದರೆ ರಸ್ತೆಯೊಂದು ಇದ್ದಕ್ಕಿದ್ದಂತೆ ಕುಸಿದ ಪರಿಣಾಮ 30 ವರ್ಷದ ಬೈಕ್ ಸವಾರನೊಬ್ಬ ಸಾವನ್ನಪ್ಪಿದ್ದಾನೆ. ಆ ದೃಷ್ಯದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

- Advertisement -



ಈ ಘಟನೆ ಕೊರಿಯಾದ  ರಾಜಧಾನಿ ಸಿಯೋಲ್‌ನ ಮಿಯೋಂಗಿಲ್-ಡಾಂಗ್ ಜಿಲ್ಲೆಯಲ್ಲಿ  ನಡೆದಿದೆ. ವಿಡಿಯೋದಲ್ಲಿರುವಂತೆ ಬೈಕ್‌ ಸವಾರನೊಬ್ಬ  ಮಿಯೋಂಗಿಲ್-ಡಾಂಗ್ ವೃತ್ತದ ಸಮೀಪ ರಸ್ತೆಯಲ್ಲಿ ಚಲಿಸುತ್ತಿರುವಾಗ ಏಕಾಏಕಿ ರಸ್ತೆ ಕುಸಿದು  ಸುಮಾರು 65 ಮೀಟರ್ ಆಳದ ಹೊಂಡ ಸೃಷ್ಟಿಯಾಗಿದೆ. ಆಗ ಬೈಕ್‌ ಸವಾರ ಆ ಹೊಂಡದಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ. ಅಷ್ಟೇ ಅಲ್ಲದೆ ಅದೇ ವೇಳೆ ಆ ರಸ್ತೆಯಲ್ಲಿ ಚಲಿಸುತ್ತಿದ್ದ ವ್ಯಾನ್‌ ಚಾಲಕಿಯೊಬ್ಬರ ಕಾರು ಆ ಹೊಂಡಕ್ಕೆ ಬಿದ್ದು ಮೇಲರಗಿ ಉಲ್ಟವಾಗಿ ಬಿದ್ದಿದೆ. ಇದರಿಂದ ಚಾಲಕಿಗೆ ಗಂಭೀರ ಗಾಯಗಳಾಗಿದ್ದು, ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

ರಕ್ಷಣಾ ಸಿಬ್ಬಂದಿ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ ಬೈಕ್ ಸವಾರನ ಮೃತದೇಹವನ್ನು ಹೊಂಡದಿಂದ ಹೊರತೆಗೆದಿದ್ದಾರೆ. ಘಟನಾ ಸ್ಥಳದಲ್ಲಿ ಬೈಕ್, ಹೆಲ್ಮೆಟ್, ಬೂಟುಗಳು ಮತ್ತು ಮೊಬೈಲ್ ಫೋನ್‌ ಸೇರಿದಂತೆ ಸಂತ್ರಸ್ತನ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಗಾಯಗೊಂಡ ವ್ಯಾನ್ ಚಾಲಕಿಯನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.

SUMMARY | A 30 year old biker was died when a road suddenly collapsed.

KEYWORDS |  biker, dies, road, collapsed,

Share This Article