ಇವತ್ತಿನಿಂದ ಹಾಲಿನ ಹೊಸ ದರ ಜಾರಿ!? ಟ್ಯಾಕ್ಸ್‌, ಕರೆಂಟ್‌ ಬಿಲ್‌ನಲ್ಲಿ ಬದಲಾವಣೆ ! ವಿವರ ಓದಿ

13

SHIVAMOGGA| MALENADUTODAY NEWS | ಮಲೆನಾಡು ಟುಡೆ  Apr 1, 2025 ‌‌ ‌

ಇವತ್ತಿನಿಂದ ಆರ್ಥಿಕ ವರ್ಷ ಬದಲಾವಣೆ ಆಗಲಿದೆ. ಅಲ್ಲದೆ ಏಪ್ರಿಲ್‌ ಒಂದರಿಂದ ಕೆಲವು ದರಗಳು ಬದಲಾವಣೆ ಆಗುತ್ತದೆ. ಅದರಂತೆ ಏನೇನು ಬದಲಾವಣೆ ಆಗಿದೆ ಎಂಬುದದನ್ನು ಗಮನಿಸುವುದಾದರೆ, ಅದರ ವಿವರ ಹೀಗಿದೆ. 

- Advertisement -

ಇವತ್ತಿನಿಂದ ಹಾಲಿನ ರೇಟು ಜಾಸ್ತಿ

ಯುಗಾದಿ ಮುಗಿಸಿ ಎದ್ದ ಜನರಿಗೆ ಇವತ್ತಿನಿಂದಲೇ ಹಾಲಿನ ದರ ಹೆಚ್ಚು ನೀಡಬೇಕು. ಹೌದು, ಕರ್ನಾಟಕ ಹಾಲು ಮಹಾ ಮಂಡಳಿ KMF ಹಾಲಿನ ದರ ಹೆಚ್ಚಿಸಿದ್ದು,  ಹೊಸ ದರ ಇವತ್ತಿನಿಂದಲೇ ಜಾರಿಗೆ ಬರಲಿದೆ. ಪ್ರತಿ ಲೀಟರ್‌ ಹಾಲು 4 ರೂಪಾಯಿ ಜಾಸ್ತಿಯಾಗಲಿದೆ.  ಮೊಸರಿನ ಬೆಲೆಯೂ ₹4 ಹೆಚ್ಚಾಗಲಿದೆ.

ಕರೆಂಟ್‌ ಬಿಲ್‌ ಜಾಸ್ತಿ

ಈ ತಿಂಗಳ ಕರೆಂಟ್‌ ಬಿಲ್‌ ಕೂಡ ಜಾಸ್ತಿ ಬರಲಿದೆ. ಅಲ್ಲದೆ ಬಿಲ್‌ ವಿಚಾರದಲ್ಲಿ ಕೆಲವೊಂದು ಗೊಂದಲವಿದ್ದು ಅದಕ್ಕೆಲ್ಲಾ ಮುಂದಿನ ತಿಂಗಳು ಬಿಲ್‌ ಬಂದಾಗಲೇ ಉತ್ತರ ಸಿಗಲಿದೆ. ಆದರೆ ಇವತ್ತಿನಿಂದಲೇ ವಿದ್ಯುತ್‌ ಬಿಲ್‌ಮೇಲೆ 36 ಪೈಸೆ ಶುಲ್ಕ ಹೆಚ್ಚಿಸಲಾಗಿದೆ.

ಇನ್ನೂ ತೆರಿಗೆ ವಿನಾಯಿತಿ ಇವತ್ತೆ ಜಾರಿ

ಇನ್ನೊಂದು ಕಡೆ ಕೇಂದ್ರ ಸರ್ಕಾರ ಬಡ್ಜೆಟ್‌ನಲ್ಲಿ ನೀಡಿ ವೈಯಕ್ತಿಕ ತೆರಿಗೆ ವಿನಾಯಿಇಯು ಇವತ್ತಿನಿಂದಲೇ ಜಾರಿಗೆ ಬರಲಿದೆ. ಸದ್ಯ ಟ್ಯಾಕ್ಸ್‌ ಸ್ಲ್ಯಾಬ್‌ನಲ್ಲಿ ದೊಡ್ಡ ರಿಯಾಯಿತಿ ನೀಡಿರುವ ಹಿನ್ನೆಲೆಯಲ್ಲಿ 12 ಲಕ್ಷದವರೆಗೂ ವೈಯಕ್ತಿಕ ಆದಾಯ ಹೊಂದಿದ್ದಲ್ಲಿ ಅವರಿಗೆ ಟ್ಯಾಕ್ಸ್‌ ಇರುವುದಿಲ್ಲ

Share This Article