SHIVAMOGGA | MALENADUTODAY NEWS | ಮಲೆನಾಡು ಟುಡೆ | Jan 23, 2025
ಲೋಕಾಯುಕ್ತ ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿದು ಮುಡಾ ಹಗರಣದಲ್ಲಿ ಸಿದ್ದರಾಮಯ್ಯನವರಿಗೆ ಕ್ಲೀನ್ ಚಿಟ್ ಕೊಟ್ಟಿದ್ದಾರೆ. ಇದೇನಾದರೂ ನಿಜವಾಗಿದ್ದರೆ ಇದರ ವಿರುದ್ದವಾಗಿ ನಾವು ಹೋರಾಟಮಾಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೂಡಾ ಹಗರಣದಲ್ಲಿ ಸಿ ಎಂ ಸಿದ್ದರಾಮಯ್ಯನವರಿಗೆ ಲೋಕಾಯುಕ್ತ ಕ್ಲೀನ್ ಚಿಟ್ ಕೊಟ್ಟಿದೆ ಎಂದು ಮಾಧ್ಯಮದಲ್ಲಿ ವರದಿ ಆಗುತ್ತಿದೆ.ಈ ಹಿಂದೆ ಸಹ ನಾವು ತನಿಖೆ ಸರಿಯಾಗಿಲ್ಲ ಎಂದು ಆರೋಪ ಮಾಡಿದ್ವಿ. ಈಗ ಕ್ಲೀನ್ ಚಿಟ್ ಕೊಟ್ಟಿದ್ದು ಏನಾದರು ನಿಜವಾದರೆ ನಮ್ಮ ಆರೋಪ ಸತ್ಯ ಆದಂತೆ ಆಗುತ್ತದೆ ಎಂದರು.ಹಾಗೆಯೇ ಲೋಕಾಯುಕ್ತ ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿದಿದ್ದಾರೆ. ಈ ಕೇಸ್ ಬಗ್ಗೆ ಹೈಕೋರ್ಟ್ ಕೂಡ ಸೂಕ್ಷ್ಮವಾಗಿ ಗಮನಿಸಿ ಮಾಹಿತಿ ಸಂಗ್ರಹಿಸಿದೆ. ಆದರೆ ಇದರ ನಡುವೆ ಹೈ ಕೋರ್ಟ್‌ನಲ್ಲಿ ತೀರ್ಪು ಬರುವ ಮುನ್ನವೇ ಲೋಕಾಯುಕ್ತ ವರದಿ ನೀಡಿದೆ. ವರದಿ ಸತ್ಯವಾದರೆ ಇದರ ವಿರುದ್ಧವಾಗಿ ನಾವು ಹೋರಾಟ ಮಾಡ್ತೇವೆ ಎಂದು ಎಚ್ಚರಿಸಿದರು

ಬಿಜೆಪಿ ಪಕ್ಷದಲ್ಲಿ ನಡೆಯುತ್ತಿರುವ ಗೊಂದಲ ವಿಚಾರ ಬಗ್ಗೆ ಮಾತನಾಡಿ ರಾಜ್ಯಾಧ್ಯಕ್ಷ ರ ವಿಚಾರವಾಗಿ ಕೇವಲ ಐದಾರು ಪ್ರಮುಖರು ನನ್ನ ವಿರುದ್ಧ ಹೇಳಿಕೆ ಕೊಡ್ತಾ ಇದ್ದಾರೆ. ಸಭೆಯಲ್ಲಿ 80 ರಿಂದ 90% ಸದಸ್ಯರು ರಾಜ್ಯಾಧ್ಯಕ್ಷ ಚೆನ್ನಾಗಿ ಕೆಲಸ ಮಾಡಿದ್ದಾರೆ ಹೇಳಿದ್ದಾರೆ ಮತ್ತೊಮ್ಮೆ ಬಿವೈ ವಿಜಯೇಂದ್ರ ಅವರನ್ನೇ ಮುಂದುವರಿಸಿ ಎಂದಿದಿದ್ದಾರೆ.ಅಸಮಾಧಾನ ಇರೋದು ಕೆಲವರಿಗೆ ಮಾತ್ರ ಎಲ್ಲಾ ಗೊಂದಲಗಳಿಗೆ ಸದ್ಯದಲ್ಲೇ ಉತ್ತರ ಸಿಗಲಿದೆ ಎಂದರು.
ಶ್ರೀ ರಾಮುಲುರವರೆ ಅಪಾರ್ಥಕ್ಕೆ ಅವಕಾಶ ಮಾಡಿಕೊಡಬೇಡಿ
ಶ್ರೀರಾಮಲು ಚರ್ಚೆ ವಿಚಾರದ ಬಗ್ಗೆ ಮಾತನಾಡಿ ಶ್ರೀರಾಮಲುರವರ ವಿಚಾರ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ಆಗಿದೆ. ಶ್ರೀರಾಮಲು ಬಗ್ಗೆ ನನಗೆ ಗೌರವ ಇದೆ. ಎಲ್ಲರೂ ಒಗ್ಗಟ್ಟಾಗಿರಬೇಕು ಅಂತಾ ರಾಧಾ ಮೋಹನ್ ದಾಸ್ ತಿಳಿಸಿದ್ದಾರೆ. ರಾಜ್ಯದಲ್ಲಿ ಬಹುಮತದೊಂದೊಂದಿಗೆ ಪಕ್ಷ ಅಧಿಕಾರಕ್ಕೆ ತರಲು ಚರ್ಚೆ ಆಗಿದೆ. ಶ್ರೀರಾಮಲುರವರಿಗೆ ವಿನಂತಿ ಮಾಡುತ್ತೇನೆ ಅಪಾರ್ಥಕ್ಕೆ ಅವಕಾಶ ಮಾಡಿಕೊಡಬೇಡಿ ಎಂದರು
SUMMARY | The Lokayukta officials, under political pressure, gave a clean chit to Siddaramaiah in the MUDA scam
KEYWORDS | Lokayukta officials, political pressure, MUDA scam, Siddaramaiah,