SHIVAMOGGA | MALENADUTODAY NEWS | ಮಲೆನಾಡು ಟುಡೆ Dec 16, 2024
ಅಡಕೆ ಬಗ್ಗೆ ಇದೀಗ ಕೇಂದ್ರ ಸರ್ಕಾರವೇ ಅಧ್ಯಯನ ನಡೆಯಲಿದೆ. ಈ ಸಂಬಂಧ ಆರೋಗ್ಯದ ಮೇಲೆ ಅಡಿಕೆಯ ಪರಿಣಾಮದ ಬಗ್ಗೆ ಕೇಂದ್ರ ಸರ್ಕಾರ ಅಧ್ಯಯನಕ್ಕೆ ಮಂದಾಗಿದ್ದು, ಇದಕ್ಕಾಗಿ ಸುಮಾರು 10 ಕೋಟಿ ರೂಪಾಯಿ ಘೊಷಣೆ ಮಾಡಲಾಗಿದೆ.
ಅಡಕೆ ಕ್ಯಾನ್ಸರ್ ಕಾರಕವಾಗಿದ್ದು, ಎಂದು ವಿಶ್ವ ಆರೋಗ್ಯ ಸಂಸ್ಥೆಯ ಅಂಗಸಂಸ್ಥೆಯೊಂದು ವರದಿ ನೀಡಿತ್ತು. ಇದರ ವಿರುದ್ಧ ಅಡಕೆ ಬೆಳೆಗಾರರ ಆಕ್ರೋಶ ಹೊರಹಾಕಿದ್ದರು. ಅಲ್ಲದೆ ಅಡಿಕೆ ಹಾಗೂ ತಂಬಾಕು ಎರಡನ್ನು ಸೇರಿಸಿ ನಡೆಸಲಾದ ಅಧ್ಯಯನ ಇದಾಗಿದ್ದರಿಂದ ಈ ಸಂಬಂಧ ಅಡಿಕೆಯ ಬಗ್ಗೆ ಮಾತ್ರ ಪ್ರತ್ಯೇಕವಾಗಿ ಅಧ್ಯಯನ ನಡೆಸಬೇಕು ಎಂಬ ವಾದ ಕೇಳಿಬಂದಿತ್ತು. ಇದಕ್ಕೆ ಪೂರಕವಾಗಿ ಕೇಂದ್ರ ಸರ್ಕಾರ ಕಾಸರಗೋಡಿನ ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಪರಲ್ ರೀಸರ್ಚ್(ಐಸಿಎಆರ್)ನಡಿ ಕಾಸರಗೋಡಿನ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆ(ಸಿಪಿಸಿಆರ್‌ಐ) ನೇತೃತ್ವದಲ್ಲಿ ಅಧ್ಯಯನ ನಡೆಸಲು ಮುಂದಾಗಿದೆ.
ಇದಕ್ಕಾಗಿ ಮೂರು ವರ್ಷಗಳ ಅವಧಿ ನೀಡಲಾಗಿದ್ದು, 10 ಕೋಟಿ ರೂಪಾಯಿಗಳನ್ನ ಒದಗಿಸಲಾಗುತ್ತಿದೆ. ಒಟ್ಟಾರೆ 16 ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಸಂಸ್ಥೆಗಳು ಅಡಕೆ ಬಗ್ಗೆ ವಿಸ್ತೃತವಾಗಿ ಅಧ್ಯಯನ ನಡೆಸಲಿದೆ.

SUMMARY | central government has initiated a study on the arecanut issue and has provided Rs 10 crore for this purpose.
KEY WORDS |central government has initiated a study on the arecanut